ಪರಿಸರ ಪಾಲನೆ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 205

₹ 254.00




Year of Publication: 1992
Published by: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
Address: ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ- 570001\n
Phone: 0821-2419872

Synopsys

‘ಪರಿಸರ ಪಾಲನೆ ’ ಕೆ.ವಿ.ಪುಟ್ಟಪ್ಪ ಅವರ ಪ್ರಧಾನ ಸಂಪಾದಕತ್ವದ ಕೃತಿಯಾಗಿದ್ದು, ಸಂಪಾದಕರಾಗಿ ಡಿ. ಶೇಷಗಿರಿರಾವ್ ಅವರು ಸಂಕಲನವನ್ನು ಹೊರತಂದಿರುತ್ತಾರೆ. ಈ ಕೃತಿಯು ಪರಿಸರದ ಕುರಿತು ಮಾತನಾಡುತ್ತದೆ. ಮನುಷ್ಯ ಅವನಿಗೆ ನೈಸರ್ಗಿಕ ಕೊಡುಗೆಯಾದ ಶತಮಾನ ಆಯುಷ್ಯ ಮತ್ತು ಇಂದ್ರಿಯಶಕ್ತಿ ಅನುಭವಿಸದಿರಲು ಕಾರಣಗಳೇನೆಂದು ಈಗ ನೋಡಬಹುದು, ಸೃಷ್ಟಿಯಲ್ಲಿ ಇವನ ಸ್ಥಾನಮಾನ ಎಷ್ಟೇ ಮುಖ್ಯವಾದದ್ದಾದರೂ ಮನುಷ್ಯ ತನ್ನ ಪರಿಸರ (Environment) ದ ಒಂದು ಅಂಶ ಮಾತ್ರ. ಈ ಪರಿಸರ ಎಂಬುದು ಅವನ ಸುತ್ತಲಿನ ಪ್ರದೇಶ. ಅಂದರೆ ಭೌಗೋಳಿಕ ಪ್ರದೇಶ ಮಾತ್ರ ಅಲ್ಲ; ಅವನ ಸುತ್ತು ಮುತ್ತು ಇರುವ ಅವನನ್ನು ಆವರಿಸಿಕೊಂಡಿರುವ ' ಪರಿಸ್ಥಿತಿ'. ಭೌಗೋಳಿಕ, ವಾಯು ಮಂಡಲ ಸಂಬಂಧದ, ಜೀವರಾಶಿ ಸಂಬಂಧದ ಮತ್ತು ಮಿಕ್ಕೆಲ್ಲಾ ಸಂಗತಿಗಳ ಒಟ್ಟು ಪ್ರಭಾವ ವನ್ನೊಳಗೊಂಡಿರುತ್ತದೆ. ಈ ವಿವಿಧ ಅಂಗಗಳು ತಮ್ಮ ತಮ್ಮ ಪ್ರಭಾವ ಬೀರುವುದಲ್ಲದೆ ಇವುಗಳ ಪರಸ್ಪರ ಕ್ರಿಯೆಯೂ ಸೇರಿ ಈ ಪರಿಸರದಲ್ಲಿ ಸೇರಿಕೊಂಡಿರುವ ಜೀವಿಯ ಮೇಲೆ ನಾನಾತರಹ ಒತ್ತಡಗಳೂ, ಎಳೆತಗಳೂ ಬೀಳುತ್ತವೆ. ಈ ಒತ್ತಡ, ಎಳೆತಗಳಲ್ಲಿ ಕೆಲವ ಕ್ಯಾದರೂ ಮಣಿಯದಿರುವಂತೆ ಜೀವಿ ಕಾಲಕ್ರಮೇಣ ಸೂಕ್ತ ವ್ಯವಸ್ಥೆಯನ್ನು ಬೆಳೆಸಿ ಏಕೈಕ ಪರಿಸರ ಎನ್ನಬಹುದಾದರೂ ಇನ್ನೊಂದು ದೃಷ್ಟಿಯಿಂದ ಒಂದೊಂದು ಜನ ಸಮುದಾಯವೂ ತನ್ನದೇ ಆದ ಪರಿಸರದಲ್ಲಿ ವಾಸಿಸುತ್ತಿದೆಯೆಂದು ಹೇಳಬಹುದು.

ಈ ಅನೇಕಾನೇಕ ಪರಿಸರಗಳ ಇತಿಮಿತಿಗಳನ್ನು ಇಲ್ಲಿ ನಿರೂಪಿಸಿರುವುದು ಕಷ್ಟ. ತನ್ನದೇ ಆದ ಭೌಗೋಳಿಕ ಲಕ್ಷಣ, ಹವಾಗುಣ, ಸಸ್ಯವರ್ಗ, ಪ್ರಾಣಿವರ್ಗ ಇತ್ಯಾದಿ ನಿರ್ದಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಪ್ರಾಂತವನ್ನು ಒಂದು ಪರಿಸರವೆಂದು ಪರಿಗಣಿಸ ಬಹುದು. ಉದಾಹರಣೆಗೆ, ನಮ್ಮ ಕರ್ನಾಟಕದಲ್ಲಿ ಮೈದಾನ (ಬಯಲುಸೀಮೆ), ಮಲೆನಾಡು ಮತ್ತು ಕರಾವಳಿ (ಘಟ್ಟದಕೆಳಗೆ) ಎಂಬ ಮೂರು ನಿರ್ದಿಷ್ಟ ಪರಿಸರ ಗಳನ್ನು ಗುರುತಿಸುವುದುಂಟು. ತಲತಲಾಂತರದಿಂದ ಅಲ್ಲಿ ವಾಸಿಸುತ್ತಿರುವ ಜನ ತಮ್ಮ ಪರಿಸರಕ್ಕೆ ಹೊಂದಿ ಕೊಂಡು ಜೀವನ ಪಥದಲ್ಲಿ ಸಾಗಿ ಬಂದರೆ ಅವರ ಬಾಳ್ವೆ ಸಫಲವಾಗುವುದು. ದೂರ ಪ್ರದೇಶಗಳಿಂದ ವಲಸೆ ಬಂದ ಜನಾಂಗಗಳು ಹೊಸ ಪರಸರಕ್ಕೆ ಹೊಂದಿಕೊಳ್ಳಲಾಗದೆ ನಶಿಸಿಹೋಗಿರುವ ನಿದರ್ಶನಗಳು ಚರಿತ್ರೆಯಲ್ಲಿ ಅನೇಕಾನೇಕ. ಪರಿಸರಕ್ಕೆ ಅನುಗುಣ ವಾದ ಮನೆಮಠ, ಉಡಿಗೆ ತೊಡಿಗೆ, ಆಹಾರ ವಿಹಾರ, ಪ್ರಯಾಣ ಸೌಕರ್ಯ, ಸಾಮಾಜಿಕ ಸಂಪ್ರದಾಯಗಳು, ಮುಂತಾದ ಅಸಂಖ್ಯಾತ ಅಂಶಗಳನ್ನು ವಿವಿಧ ಜನಾಂಗ ಗಳ ಜೀವನದಲ್ಲಿ ಎತ್ತಿತೋರಿಸಬಹುದು. ನಾಗರಿಕತೆ, ಸಂಸ್ಕಾರ, ಸಂಸ್ಕೃತಿಗಳೂ ಮಣ್ಣಿ ನಿಂದಲೇ, ಅರ್ಥಾತ್ ಪರಿಸರದಿಂದಲೇ ಉದ್ಭವಿಸುವುವು. ಪರಿಸರ, ಅದರೊಳಗಿನ ಜೀವರಾಶಿ (ಅಥವಾ ಈಗ ನಮಗೆ ಸಂಬಂಧಪಟ್ಟ ಮಾನವ ಜನಾಂಗ), ಇವೆರಡು ವಸ್ತ್ರದ ಹಾಸು, ಹೊಕ್ಕು ಇದ್ದಂತೆ; ಇವೆರಡರ ನಡುವೆ ಸಾಮರಸ್ಯವಿರತಕ್ಕದ್ದು. ಭೂಮಿಯಮೇಲೆ ಅನೇಕಾನೇಕ ಮಾನವನ ಜೀವನಕ್ಕೆ ಯೋಗ್ಯ ಪರಿಸರಗಳಿರುವುದ ರಿಂದ 'ವೈವಿಧ್ಯದಲ್ಲಿ ಏಕತೆ' ಎಂಬ ಸೂತ್ರದ ಪ್ರಕಾರ ಅನಾದಿಯಿಂದ ಮಾನವಕುಲ ಬಹುಮುಖ್ಯವಾಗಿ ವಿಕಾಸ ಹೊಂದಿದೆ ಎಂಬುವುದನ್ನು ತಿಳಿಸುತ್ತದೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books