ಲೇಖಕ ಕಿರಣ್ ವಿ. ಸೂರ್ಯ ಅವರ ಲೇಖನ ಕೃತಿ ‘ಬಯೊಮಿಮಿಕ್ರಿ: ಪ್ರಕೃತಿ, ವಿಸ್ಮಯ, ಕಲಿಕೆ’. ನಮಗೆ ವರ್ತಮಾನದಲ್ಲಿ ತೊಂದರೆ ನೀಡುತ್ತಿರುವ ಸಮಸ್ಯೆಗಳನ್ನು ಪ್ರಕೃತಿ ಎಂದು ಗುರುತಿಸಿ, ಅದಕ್ಕೆ ಪರಿಹಾರವನ್ನೂ ಪಡೆದುಕೊಂಡಿದೆ. ನಮ್ಮ ಸಮಸ್ಯೆಯನ್ನು ಸರಿಯಾಗಿ ಅರಿತುಕೊಂಡು, ನಮ್ಮ ಪ್ರಶ್ನೆಯ ವ್ಯಾಖ್ಯೆಯನ್ನು ಸ್ಪಷ್ಟವಾಗಿಸಿ, ಅದನ್ನು ನಿಸರ್ಗದ ಬೃಹತ್ ಸೃಷ್ಟಿಯ ಜೊತೆಗೆ ಸಮೀಕರಣಗೊಳಿಸಿ, ಅದರ ನಡುವಿನಿಂದ ನಮ್ಮ ಸಮಸ್ಯೆಗೆ ಒಂದು ಸಮನ್ವಯದ ಪರಿಹಾರವನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು “ಬಯೊಮಿಮಿಕ್ರಿ” ಎನ್ನುತ್ತಾರೆ. ಈ ಕುತೂಹಲಕಾರಿ ವಿಷಯವನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಈ ಪುಸ್ತಕ. ಪುಸ್ತಕದ ಕುರಿತು ಲೇಖಕರು ಹೇಳುವಂತೆ, ನಿರ್ಮಾಣ ಕ್ಷೇತ್ರದಲ್ಲಗಲಿ, ತಂತ್ರಜ್ಞಾನದ ನಿಟ್ಟಿನಲ್ಲಾಗಲಿ, ರಾಸಾಯನಿಕ ಅಥವಾ ಇನ್ಯಾವುದೇ ವಲಯದ ಪ್ರಶ್ನೆಗಳಿಗೆ ನಿಸರ್ಗದ ಬಳಿ ಉತ್ತರವಿದೆ. ನಿಸರ್ಗದ ರಚನೆಯನ್ನು ಕುರುಡಾಗಿ ಅನುಕರಣೆ ಮಾಡುವುದರ ಬದಲು ಅದರ ಹಿಂದಿನ ಮರ್ಮವನ್ನು ಅರಿತು ಮುನ್ನಡೆದಿದ್ದು ಬುದ್ದಿವಂತ ಮಾನವನ ಸಾಫಲ್ಯವಾಗಿದೆ. ಇದು ಬಯೋಮಿಮಿಕ್ರಿಯ ಆರಂಭಿಕ ಹಂತಗಳು.
©2025 Book Brahma Private Limited.