ಲೇಖಕ ನಾಗೇಶ ಹೆಗಡೆ ಅವರ ಕೃಷಿ ಮತ್ತು ಪರಿಸರ ಚಿಂತನೆಗಳ ಬರಹ ಸಂಕಲನ ‘ಅಭಿವೃದ್ಧಿಯ ಅಂಧಯುಗ’. ದೇಶ ಕಟ್ಟುವ ಕೆಲಸವನ್ನು ಖಾಸಗಿ ಒಡೆತನದ ಸಂಸ್ಥೆಗಳಿಗೆ ಒಪ್ಪಿಸಿದ ಮೇಲೆ, ದೋಚಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಬರೀ 15 ವರ್ಷಗಳಲ್ಲಿ ನಮ್ಮ ಶತಕೋಟ್ಯಾಧೀಶರ ಸಂಖ್ಯೆ ಐವತ್ತಕ್ಕೇರಿದೆ. ಇದರಿಂದ ಸಾಮಾನ್ಯ ಪ್ರಜೆ ಗೌರವಯುತ ಬದುಕನ್ನು ನಡೆಸಲಾಗದೆ ಲಕ್ಷಾಂತರ ಜನ ಜೀವ ಹರಣ ಮಾಡಿಕೊಂಡಿದ್ದಾರೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಗ್ರಹಿಕೆಗೆ ಬಾರದ ಇಂತಹ ಅದೆಷ್ಟೋ ಸಂಗತಿಗಳು ದೇಶವನ್ನು ಸಂಕಷ್ಟಕ್ಕೆ ತಳ್ಳುತ್ತಿವೆ. ಅಂತಹ ಅವಿತು ಕುಳಿತ ಮುಖಗಳನ್ನು ಕೃತಿಯಲ್ಲಿ ಪರಿಚಯಿಸಲಾಗಿದೆ.
©2025 Book Brahma Private Limited.