ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ ಅವರ ಕೃತಿ-ಅರಣ್ಯಶಾಸ್ತ್ರ ಭಾರತ ಕೃಷಿ ಪ್ರಧಾನ ದೇಶ. ಕರ್ನಾಟಕವೂ ಹೊರತಲ್ಲ. ಈ ಭೂಪ್ರಧೇಶದಲ್ಲಿ ಹಚ್ಚ ಹಸುರಿನ ಕಾಡು ಇದೆ. ಪಶ್ಚಿಮ ಘಟ್ಟಗಳಿವೆ. ಅರಣ್ಯಗಳು ಕೃಷಿಗೆ ತಾಯಿಯಂತೆ. ವಿವಿಧ ಭೂಗುಣ ಹವಾಗುಣಗಳಿಗೆ ಒಗ್ಗುವ ಮರಜಾತಿಗಳು, ಸಾಲುಮರಗಳು, ಉದ್ಯಾನವನದ ಮರಗಳು, ಅಂದದ ಹಂದರದ ಸುಂದರ ಪುಷ್ಪಗಳ ಮರಗಳು, ಮೇವಿನ ಹುಲ್ಲುಗಳು, ಔಷಧಿಗೆ ಉಪಯುಕ್ತವಾದ ಅನೇಕ ಅಮೂಲ್ಯ ಮರ, ಗಿಡ, ಮೂಲಿಕೆಗಳು, ವನ್ಯಮೃಗ ಪಕ್ಷಿಗಳು, ಸರ್ಪಗಳು, ಅರಣ್ಯ ಕೀಟಗಳು, ಅರಣ್ಯ ಬುಡಕಟ್ಟಿನವರ ರೀತಿ ನೀತಿಗಳು, ಭೂಸವೆತ - ಅದರ ಕಾರಣ, ಪರಿಣಾಮ, ಪರಿಹಾರಗಳು ಹಾಗೂ ಸಾಮಾಜಿಕ ಅರಣ್ಯಗಳ ನಿರ್ಮಾಣ, ನಿರ್ವಹಣೆ, ನೀತಿ, ಅವುಗಳ ಬಗ್ಗೆ ಜನರ ಹೊಣೆ ಇವುಗಳೆಲ್ಲದರ ವಿಶ್ಲೇಷಣೆಗಳೂ ಇಲ್ಲಿ ಸೇರಿವೆ. ಕರ್ನಾಟಕ ಅರಣ್ಯ ಪ್ರದೇಶದ ಭೌಗೋಳಿಕ ಮಾಹಿತಿ ಒಳಗೊಂಡಿದೆ.
©2024 Book Brahma Private Limited.