ಉರಗತಜ್ಞ ಗುರುರಾಜ ಸನಿಲ್ ಅವರ ಕೃತಿ-ನಾಗಬೀದಿಯೊಳಗಿಂದ. ಹಾವುಗಳ ಕುರಿತು ಮನುಷ್ಯರಲ್ಲಿದ್ದ ನಂಬಿಕೆಗಳು ನೂರಾರು. ಅವುಗಳ ಸತ್ಯಾಸತ್ಯತೆಯು ಪ್ರಶ್ನಾರ್ಹ. ಆದರೆ, ಕುತೂಹಲಕಾರಿ. ಈ ನಂಬಿಕೆಗಳು ಹಾವುಗಳ ಸಂತತಿಯನ್ನು ಉಳಿಸುವಲ್ಲಿ ನೆರವಾಗಿವೆ, ಆದರೆ, ಬಹುತೇಕವಾಗಿ, ಇವುಗಳನ್ನು ಕೊಲ್ಲುವುದಕ್ಕೂ ಪ್ರಚೋದಿಸಿವೆ. ಕರ್ನಾಟಕದ ಕರಾವಳಿಯಲ್ಲಿ ನಾಗಗಳ ಕುರಿತು ವಿಪರೀತ ನಂಬಿಕೆಗಳು ಇವೆ. ಇಂತಹ ನಂಬಿಕೆಗಳ ಸುತ್ತ ಮುತ್ತ ಚರ್ಚಿಸುವುದು ಈ ಕೃತಿಯ ವೈಶಿಷ್ಟ್ಯ. ಆದ್ದರಿಂದ, ಈ ಕೃತಿಗೆ ‘ಕರಾವಳಿ ಕರ್ನಾಟಕದ ನಾಗನಂಬಿಕೆಗಳ ಆಸುಪಾಸು’ ಎಂಬ ಉಪಶೀರ್ಷಿಕೆಯ ನೀಡಿದ್ದು, ಪರಿಸರ ಸ್ನೇಹಿ ಮನೋಭಾವವನ್ನು ಜನಮಾನಸದಲ್ಲಿ ಬೆಳೆಸುವುದೂ ಸಹ ಈ ಕೃತಿಯ ಉದ್ದೇಶವಾಗಿದೆ.
©2024 Book Brahma Private Limited.