ಉರಗ ತಜ್ಞ ಗುರುರಾಜ್ ಸನಿಲ್ ಅವರ ಕೃತಿ-ವಿಷಯಾಂತರ. ಪರಿಸರ ಪ್ರೇಮಿಯಾಗಿರುವ ಲೇಖಕರು, ಹಾವುಗಳ ಬಗ್ಗೆ ಮನುಷ್ಯರಿಗಿರುವ ನಂಬಿಕೆ, ಭೀತಿ ಇತ್ಯಾದಿ ಕುರಿತ ಅಂಶಗಳು ಇಲ್ಲಿಯ ಚರ್ಚೆಯ ವಸ್ತು. ನರಜೀವಿ-ಉರಗಜೀವಿಗಳ ಒಡನಾಟದ ಜೀವನಗಾಥೆ ಎಂಬುದು ಈ ಕೃತಿಯ ಉಪಶೀರ್ಷಿಕೆ. ಪರಸ್ಪರ ಜೀವ ಭೀತಿ ಇಟ್ಟುಕೊಂಡಾದರೂ ಮನುಷ್ಯ-ಹಾವುಗಳ ಮಧ್ಯೆ ನಡೆಯುತ್ತಲೇ ಬಂದ ಬದುಕಿನ ಕಥೆಯನ್ನು ಹೇಳುವುದು ಈ ಕೃತಿಯ ವಸ್ತು. ಪ್ರಕೃತಿಯಲ್ಲಿಯ ಸಕಲ ಜೀವಸಂಕುಲಗಳೊಂದಿಗೆ ಮನುಷ್ಯ ಹೇಗೆ ಸಾಮರಸ್ಯದೊಂದಿಗೆ ಬದುಕುವ ಅನಿವಾರ್ಯತೆಗಳನ್ನು, ಅದರ ಮಹತ್ವವನ್ನು ತೋರುವ ಕೃತಿ ಇದು.
©2024 Book Brahma Private Limited.