ಲೇಖಕ ರಾಧಾಕೃಷ್ಣ ಎಸ್. ಭಡ್ತಿ ಅವರ ಲೇಖನಗಳ ಸಂಕಲನ ʻಅಮೃತಧಾರೆʼ. ಪುಸ್ತಕವು ಕಲುಷಿತವಾದ ನದಿಗಳು ಹಾಗೂ ಅದನ್ನು ಸಂಸ್ಕರಿಸದಿರುವ ಪರಿಣಾಮದ ಬಗ್ಗೆ ಎಚ್ಚರಿಸುತ್ತದೆ. ನದಿ ವಿಷಮಯವಾಗಿದೆ. ಈ ನೀರಿನಲ್ಲಿ ಸಲ್ಫರ್ ಹಾಗೂ ಮೆಟಲ್‌ನ ಮಿಶ್ರಣದಿಂದ ʻಆರ್ಸೆನಿಕ್ʼ ಎನ್ನುವ ಮಾರಕ ವಿಷವೊಂದು ರೂಪುಗೊಳ್ಳುತ್ತದೆ. ಅದನ್ನು ಸುತ್ತಲಿನ ಜಮೀನುಗಳಿಗೆ ಉಪಯೋಗಿಸುವುದರಿಂದ ಅಲ್ಲಿ ಗರಿಕೆಯೂ ಬೆಳೆಯದು. ಜೊತೆಗೆ ಮನೆಯೊಳಗಿನ ಉಪಯೋಗಕ್ಕೂ ಇದು ಮಾರಕವಾಗಿದೆ. ಭಾರತ ಸೇರಿ ನೇಪಾಳ, ಬಾಂಗ್ಲಾದೇಶಗಳಲ್ಲಿ ನದಿ ನೀರಿನ ಬಳಕೆಯಿಂದ ಸಹಸ್ರಾರು ಜನರು ಸಾವಿಗೀಡಾಗಿರುವುದು ಈ ಕಾರಣದಿಂದಲೇ. ಇನ್ನು, ಭೂಮಿಯನ್ನು ಯಂತ್ರಗಳ ಮೂಲಕ ಆಳದವರೆಗೆ ಉಳುಮೆಮಾಡಿ ಭೂ ರಂಧ್ರಗಳು ಮುಚ್ಚಿಹೋದ ಪರಿಣಾಮ ಮಣ್ಣಿನಲ್ಲಿ ಪಿಎಚ್ ಅಂಶ ತೀವ್ರವಾಗಿ ಇಳಿಕೆಯಾಗುತ್ತಿದೆ. ಇದರಿಂದ ಭತ್ತದ ಗದ್ದೆಗಳಲ್ಲಿ ನಿಂತ ನೀರು ಆಮ್ಲಯುಕ್ತವಾಗಿ ಅಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ. ಹಾಗಾಗಿ ನದಿನೀರನ್ನು ಸಂರಕ್ಷಿಸುವುದು ತೀರಾ ಅಗತ್ಯದ ವಿಚಾರ ಎನ್ನುತ್ತಾರೆ ರಾಧಾಕೃಷ್ಣ ಅವರು.
©2024 Book Brahma Private Limited.