ಲೇಖಕ ಅ.ನ. ಯಲ್ಲಪ್ಪ ರೆಡ್ಡಿ ಹಾಗೂ ಲೇಖಕಿ ವಿ. ಗಾಯತ್ರಿ ಅವರ ಲೇಖನ ಕೃತಿ ʻಅರಣ್ಯೆ ನಿನಗೆ ಶರಣುʼ. ಈವರೆಗೆ ಗುರುತಿಸಲ್ಪಟ್ಟ ಹಾಗೂ ಗುರುತಿಸಲ್ಪಡದ ಅಸಂಖ್ಯಾತ ವೃಕ್ಷ, ಜೀವ ಸಂಪತ್ತು ನಮ್ಮ ನಾಡಿನಲ್ಲಿವೆ. ಜೊತೆಗೆ ನಮ್ಮ ಹಿರಿಯರಿಗೆ ಪರಿಸರದ ಮೇಲೆ ಇದ್ದ ಸೂಕ್ಷ್ಮ ಒಳಗಣ್ಣು, ಕೃಷಿಯ ಮೇಲಿನ ಜ್ಞಾನ, ಅವರ ಕೊಡುಗೆಗಳನ್ನೂ ಲೇಖಕರು ಇಲ್ಲಿ ವಿವರಿಸುತ್ತಾರೆ. ಸಂಪತ್ತುಗಳು ದೊರೆಯುವ ಮೂಲ, ಪರಿಸರದ ವ್ಯವಸ್ಥೆ, ಜೀವ-ಜಾಲಗಳ ವೈವಿಧ್ಯತೆ, ನಾಡಿನಿಂದ ನಾಡಿಗೆ ಬದಲಾಗುವ ಕೃಷಿ ಪದ್ದತಿಗಳು ಹೀಗೆ ಪ್ರಕೃತಿಯ ವಿಸ್ಮಯಕಾರಿ ಸಂಗತಿಗಳನ್ನು ಬಿಡಿಬಿಡಯಾಗಿ ಇಲ್ಲಿ ವಿವರಿಸಿದ್ದಾರೆ. ಆದರೆ ಅಭಿವೃದ್ದಿ ಮತ್ತು ಆಧುನಿಕತೆಯ ಹೆಸರಿನಲ್ಲಿ ಇಂದು ಸಂಪನ್ಮೂಲಗಳು, ಕಾಡು, ಮಣ್ಣು- ನದಿ, ಬೆಟ್ಟ ಎಲ್ಲವೂ ಛಿದ್ರವಾಗುತ್ತಿವೆ. ಇಂತಹ ಅಮಾನವೀಯ ಕೃತ್ಯಗಳಿಗೆ ಬಲಿಯಾಗುತ್ತಿರುವ ಸಂಪನ್ಮೂಲಗಳ ಬಗ್ಗೆ ಹೇಳುತ್ತಾ ಓದುಗನಲ್ಲಿ ಜಾಗೃತ ಮನೋಭಾವ ಬೆಳೆಸುವ ಪ್ರಯತ್ನವೂ ಇಲ್ಲಿ ನಡೆದಿದೆ. ಇದು ಲೇಖಕರ ಪರಿಸರ ಪ್ರಜ್ಞೆಯನ್ನು ಎತ್ತಿತೋರಿಸುತ್ತದೆ.
©2024 Book Brahma Private Limited.