ಲೇಖಕ ಪ.ಮಾನು ಸಗರ ಅವರು ಪರಿಸರ ಸಂಬಂಧಿ ಬರೆದ ಬರಹಗಳ ಕೃತಿ-ಪರಿಸರ ಪ್ರಜ್ಞೆ. ಪರಿಸರ ಎಂದರೇನು, ಪರಿಸರ ವಿಜ್ಞಾನ, ಜೀವ ಪರಿಸರ ವ್ಯವಸ್ಥೆ, ಜೀವವೈವಿಧ್ಯತೆ, ಪರಿಸರ ಮಾಲಿನ್ಯದ ಕಾರಣಗಳು,ಪರಿಸರ ಉಳಿಸುವ ವಿಧಾನಗಳು, ಮರಗಳ ಔದಾರ್ಯತೆ, ಪರಿಸರ ಕಾಯ್ದೆಗಳು, ಅಂತಾರಾಷ್ಟ್ರೀಯ ಸಮ್ಮೇಳನಗಳು, ಅರಣ್ಯ ಪರಿಸರ ಘೋಷಣೆಗಳು, ಸೇರಿದಂತೆ ಮರಗಳನ್ನು ರಕ್ಷಿಸಿದ ಮಹನೀಯರಾದ ಅಮೃತ ದೇವಿಯ ಅಮರತ್ವ, ಸುಂದರಲಾಲ್ ಬಹುಗುಣ, ಗೌರಾದೇವಿ, ಚಂಡಿಕಾ ಪ್ರಸಾದ್ ಭಟ್, ಸಾಲುಮರದ ತಿಮ್ಮಕ್ಕ ಕುರಿತು ಲೇಖನಗಳನ್ನು ಒಳಗೊಂಡಿದೆ. ಪರಿಸರ ಪ್ರೇಮಿಗಳಿಗೆ ಒಂದು ಆಕರ ಗ್ರಂಥವಾಗಿದೆ.
©2025 Book Brahma Private Limited.