ಡೇರಿ ಡಾಕ್ಟರ್‌ ಹೋರಿ ಮಾಸ್ಟರ್‌

Author : ಗಣೇಶ ಹೆಗಡೆ ನೀಲೆಸರ

Pages 148

₹ 120.00




Year of Publication: 2012
Published by: ಭೂಮಿ ಬುಕ್ಸ್
Address: ಭೂಮಿ ಬುಕ್ಸ್, # ಮಳಿಗೆ ಸಂಖ್ಯೆ 150, 1ನೇ ಮೇನ್, 2ನೇ ಮುಖ್ದರಸ್ತೆ, ಶ್ರೀರಾಮಪುರ, ಶೇಷಾದ್ರಿಪುರಂ, ಬೆಂಗಳೂರು-560020.
Phone: 9449177628

Synopsys

ಪಶುವೈದ್ಯಲೋಕದ ಪರಮಾಯಿತಿ ಕತೆಗಳು ಹಸುವಿನ ಪ್ರಸೂತಿಯ ತಮಾಷೆ ಪ್ರಸಂಗ ಚಡ್ಡಿ ತಿಂದ ಮೇಕೆಯ ಕಿಲಾಡಿ ಕತೆ, ಡಾಕ್ಟರನ್ನೇ ಬೇಸ್ತು ಬೀಳಿಸಿದ ಬೆಕ್ಕು ಖಿಲಾರಿ ಎತ್ತಿನ ಸೆಟೆಗಾಲು ಸರಿಗಾಲು ಕುದುರೆವೈದ್ಯದ ಕೋಲ್ಕಿಂಚಿನ ಸಂದರ್ಭ ಜರ್ಸಿದನದ ಕಾಯಿಲೆ ವೈದ್ಯನಿಗೇ ತಗುಲಿದಾಗ ನಾಯಿ ಬದುಕಿಸಲು ಕೃತಕ ಉಸಿರಾಟ, ಒಂದೆ, ಎರಡೆ? ಈ ಕೃತಿಯ ಪುಟಪುಟದಲ್ಲೂ ಪಶುವೈದ್ಯ ಲೋಕದ ಪೇಚು, ರೈತವರ್ಗದ ಮುಗ್ಧಕ್ರೌರ್ಯ, ಡಾಕ್ಟರ್‌ಗಳ ಪಡಪೋ ವೆಟರಿನರಿ ವಿದ್ಯಾರ್ಥಿಗಳಿಗೆ ಡೇರಿ ನಡೆಸುವ ಪಶುಪಾಲಕರಿಗೆ, ರೈತ ಸಮುದಾಯಕ್ಕೆ ಹಾಗೂ ಸಾಮಾನ್ಯ ಓದುಗರಿಗೂ ಮುದನೀಡುವ ನೈಜ ಅನುಭವಗಳ ಮಸಾಲೆ ಮಿಶ್ರಣವೇ ಡೇರಿ ಡಾಕ್ಟರ್‌ ಹೋರಿ ಮಾಸ್ಟರ್‌ ಆಗಿದೆ.

About the Author

ಗಣೇಶ ಹೆಗಡೆ ನೀಲೆಸರ

ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಡಿಪ್ಲೊಮಾ ಪದವೀಧರರು. ಪ್ರಸ್ತುತ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಅಡಿಯಲ್ಲಿ ಶಿರಸಿಯಲ್ಲಿರುವ 'ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ'ದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಾದೇಶಿಕ ಸಂಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಸ್ವದೇಶಿ ವಿಜ್ಞಾನ ಆಂದೋಲನ, 6ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ 'ಅತ್ಯುತ್ತಮ ಪ್ರಬಂಧ ಮಂಡನೆ' ಪ್ರಶಸ್ತಿ. ಕೃಷಿಮಾಧ್ಯಮ ಕೇಂದ್ರ ಧಾರವಾಡ  ಸಂಸ್ಥೆಯಿಂದ ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ ಅತ್ಯುತ್ತಮ ಅಭ್ಯರ್ಥಿ ಪುರಸ್ಕೃತರು. 2012-13ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 'ಹೈನು ಹೊನ್ನು' ಕೃತಿಗಾಗಿ ಶ್ರೇಷ್ಠ ಲೇಖಕ ಪ್ರಶಸ್ತಿ, 2016 ...

READ MORE

Related Books