ಆದಿಪುರಾಣವು ಹೊರ ಪರಿವೇಷದಲ್ಲಿ ಜೈನಧರ್ಮೀಯರಿಗೆ ಸಂಬಂಧಿಸಿದಂತೆ ಕಂಡರೂ ಆಂತರ್ಯದಲ್ಲಿ ಅದು ಬದುಕನ್ನು ಕುರಿತ ಹುಡುಕಾಟವೇ ಆಗಿದೆ. ಕಾವ್ಯದ ಮೊದಲಲ್ಲಿ ಮಾನವ ಸಂಕುಲವು ತನ್ನ ಅಸ್ತಿತ್ವದ ಆದಿಮ ಹಂತದಲ್ಲಿ ಪ್ರಕೃತಿಯೊಡನೆ ಹೊಂದಿಕೊಳ್ಳುವ ಕ್ರಮಾಗತವಾದ ರೀತಿಯ ಕುರಿತ ಬಣ್ಣನೆಯಿದ್ದರೆ, ಮುಂದಿನ ನಿರೂಪಣೆಯಲ್ಲಿ ಮಾನವ ಚೇತನವು ಎದುರಿಸುವ ಬದುಕಿನ ನಿತ್ಯನಿಗೂಢಗಳು ಹಾಗೂ ಇರುವಿಕೆಯ ಸಾರ್ಥಕತೆಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪರಿಯನ್ನು ಈ ಕೃತಿಯು ವಿವರಿಸುತ್ತದೆ.
©2024 Book Brahma Private Limited.