ಬೆಳ್ಳಾವೆ ವೆಂಕಟನಾರಾಣಪ್ಪ ಅವರ ಕೃತಿ-ವಿಕ್ರಮಾರ್ಜುನ ವಿಜಯಂ. ಮೂಲ ಹಾಗೂ ಗದ್ಯಾನುವಾದ ಸಮೇತ ನೀಡಿರುವ ಕೃತಿಯಲ್ಲಿ ಪಂಪನ ವಿಕ್ರಮಾರ್ಜುನ ವಿಜಯಂ ಮೂಲ ಕೃತಿಯ ವಿಶ್ಲೇಷಣೆ ಇದೆ. ಆದಿ ಕವಿ ಪಂಪನ ಎರಡನೇ ಕೃತಿ ಇದು. ಅರಿಕೇಸರಿ ಆಸ್ಥಾನದಲ್ಲಿದ್ದ ಪಂಪನು ಆರು ತಿಂಗಳ ಅವಧಿಯಲ್ಲಿ ಆದಿ ಪುರಾಣ ಹಾಗೂ ವಿಕ್ರಮಾರ್ಜುನ ವಿಜಯಂ ’ ಈ ಎರಡು ಕೃತಿಗಳನ್ನು ಬರೆದಿದ್ದಾನೆಂದು ಹೇಳಲಾಗುತ್ತಿದೆ. ತನ್ನ ಅರಸು ವಿಕ್ರಮಾರ್ಜುನನ ಶೌರ್ಯವನ್ನು ಇಲ್ಲಿ ಕವಿಯು ಬಣ್ಣಿಸಿದ್ದಾನೆ. ಕೃತಿಯಲ್ಲಿ ಸಂಪಾದನಾ ವಸ್ತುವು ಬೆಳ್ಳಾವೆ ವೆಂಕಟನಾರಾಣಪ್ಪ ಅವರ ವಿದ್ವತ್ ನ್ನು ಸೂಚಿಸುತ್ತದೆ.
©2024 Book Brahma Private Limited.