ಲೇಖಕ ಎನ್.ಕೆ.ಪದ್ಮನಾಭ ಅವರ ಕೃತಿ ’ಸುದ್ದಿ ಸಂವಿಧಾನ’. ಸುದ್ದಿಗೂ ಅದರದ್ದೇ ಆದ ಸಂವಿಧಾನವಿದೆ, ಇದು ಸುದ್ದಿಯ ಸಂರಚನೆಯ ಬಾಹ್ಯ ಸ್ವರೂಪದ ನಿರ್ಧಾರಕ ಅಂಶಗಳನ್ನಷ್ಟೇ ಒಳಗೊಂಡಿರುವುದಿಲ್ಲ. ಬರೆಯುವ, ನಿರೂಪಣೆಯ ಮತ್ತು ಮಾಹಿತಿ ಸಂಗ್ರಹ ಕ್ರಿಯೆಗಳ ಯಾಂತ್ರಿಕ ನೆಲೆಯ ವಿವರಗಳನ್ನಷ್ಟೇ ಆಧರಿಸಿರುವುದಿಲ್ಲ. ಒಂದು ಪೀಳಿಗೆಯ ಪ್ರಜ್ಞೆಯ ಮಟ್ಟ ಎತ್ತರಿಸುವ ವೈವಿಧ್ಯಮಯ ಪಾತ್ರನಿರ್ವಹಣೆಯ ಅನಂತ ಹೊಣೆಗಾರಿಕೆಗಳ ಸಾಧ್ಯತೆಗಳ ತಾತ್ವಿಕ ಶ್ರೇಷ್ಠತೆಯನ್ನು ಮನಗಾಣಿಸುವ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡಿರುತ್ತದೆ. ಈ ದೃಷ್ಟಿಯಿಂದಲೇ ಸುದ್ದಿ ಮಾಧ್ಯಮವನ್ನು ರೂಢಿಸಿಕೊಂಡು ಕ್ರಿಯಾಶೀಲರಾಗ ಬೇಕಾಗುತ್ತದೆ. ಈ ಬಗೆಯ ಪೂರ್ವ ತಯಾರಿಯಿಲ್ಲದಿದ್ದರೆ ಸುದ್ದಿಯ ಸಕಾರಾತ್ಮಕ ಪ್ರಭಾವವನ್ನು ವಿಸ್ತಾರಗೊಳಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಲಾಗದು. ಸುದ್ದಿಯ ಕುರಿತಾದ ಗ್ರಹಿಕೆಗಳೂ ಬದಲಾಗಿ ಮಾಧ್ಯಮಗಳ ವಿತಂಡವಾದಿ ದೃಷ್ಟಿಕೋನ ಗಳನ್ನು ನಿರಾಕರಿಸುವ ಸಾಮೂಹಿಕ ಚಳವಳಿಯೂ ಚಿಗುರಿಕೊಳ್ಳಬೇಕು ಎಂಬ ನಿರೀಕ್ಷೆಯಿಂದ ಈ ಕೃತಿಯನ್ನು ಎನ್.ಕೆ ಪದ್ಮನಾಭ ರೂಪಿಸಿದ್ದಾರೆ.
©2024 Book Brahma Private Limited.