‘ಡಿಜಿಟಲ್ ಮಾಯೆಯೊಳಗೆ ಮಾಧ್ಯಮಲೋಕ’ ಸಿಬಂತಿ ಪದ್ಮನಾಭ ಕೆ.ವಿ ಅವರ ಲೇಖನ ಸಂಕಲನ. ಪತ್ರಿಕೆ, ರೇಡಿಯೋ, ಟಿವಿ ಎಂಬಿತ್ಯಾದಿ ಮಾಧ್ಯಮ ವರ್ಗೀಕರಣದ ಕಾಲ ಮುಗಿದು ನಾವೀಗ ಡಿಜಿಟಲ್ ಯುಗಕ್ಕೆ ಬಂದು ನಿಂತಿದ್ದೇವೆ. ಮೊಬೈಲ್ ಎಂಬ ಅಂಗೈ ಅರಮನೆಯೊಳಗೆ ಎಲ್ಲಾ ಮಾಧ್ಯಮಗಳೂ ಸಂಗಮಿಸಿವೆ. ಈ ನಿಟ್ಟಿನಲ್ಲಿ ಮಾಧ್ಯಮಗಳ ಒಟ್ಟು ಸ್ವರೂಪ, ಬಳಕೆ, ಕಾರ್ಯನಿರ್ವಹಣೆ, ವ್ಯವಹಾರ ಬದಲಾಗಿರುವಂತೆ ಅವುಗಳ ಕಡೆಗೆ ನಾವು ನೋಡುವ ದೃಷ್ಟಿಕೋನವೂ ಬದಲಾಗಬೇಕಿದೆ. ಈ ಪುಸ್ತಕ ಅಂತಹದ್ದೊಂದು ಹೊಸ ದೃಷ್ಟಿಯನ್ನು ಅನಾವರಣಗೊಳಿಸಿದೆ.
ಸ್ಮಾರ್ಟ್ ಫೋನ್ ಕಾಲದ ಮಾಧ್ಯಮರಂಗದ ಸವಾಲುಗಳೇನು, ಡಿಜಿಟಲ್ ವೈಭವದ ನಡುವೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯ ಉಳಿದಿದೆಯೇ, ರೋಬೋಟ್ ಪತ್ರಕರ್ತರು ಹುಟ್ಟಿಕೊಂಡರೆ ಏನಾಗಬಹುದು, ಮಾಹಿತಿಯ ಅತಿಸಾರದಿಂದ ಆಗಬಹುದಾದ ಅನಾಹುತಗಳೇನು, ಈ ಮಾಯಾಲೋಕದಲ್ಲಿ ಪರಿಸರ, ಕೃಷಿ, ಮಹಿಳೆ, ಭಾಷೆ, ವಸ್ತುನಿಷ್ಠತೆ, ನೈತಿಕತೆಗಳ ಸ್ಥಾನಮಾನ ಏನು ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಗಂಭೀರ ಪ್ರಯತ್ನ ಈ ಕೃತಿಯಲ್ಲಿದೆ.
‘ಡಿಜಿಟಲ್ ಮಾಯೆಯೊಳಗೆ ಮಾಧ್ಯಮಲೋಕ’ ಕೃತಿಯ ಬಗೆಗೆ ಸಿಬಂತಿ ಪದ್ಮನಾಭ ಅವರ ಮಾತುಗಳು ಇಲ್ಲಿವೆ.
©2024 Book Brahma Private Limited.