ಭಾಷಾಂತರ ಮತ್ತು ಮಾಧ್ಯಮಕ್ಕೆ ಸಂಬಂಧಿಸಿ ಅಧ್ಯಯನ ಮಾಡುವವರಿಗೆ ಕೈಪಿಡಿ ’ಮಾಧ್ಯಮ ಮತ್ತು ಭಾಷಾಂತರ’. ಭಾಷಾಂತರ ಎಂಬುದು ಕಲೆಯೂ ಹೌದು ಶಾಸ್ತ್ರವೂ ಹೌದು. ಜಗತ್ತಿನ ಮಾಹಿತಿಗಳನ್ನು ಮಾಧ್ಯಮಗಳು ಜನರಿಗೆ ತಲುಪಿಸಬೇಕಾದರೆ “ಅನುವಾದ ಕಲೆ'ಯನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ಇಂದಿನ ಪ್ರಿಂಟ್ ಮತ್ತು ದೃಶ್ಯಮಾಧ್ಯಮಗಳಿಗೆ ಅನುವಾದ ಮಾಡುವುದು ಅಗತ್ಯದ ಕೆಲಸವಾಗಿದೆ. ಜಗತ್ತಿನ ಜ್ಞಾನವನ್ನು ಆಯಾ ಭಾಷೆಯ ಮೂಲಕ ಜನರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಮಾಧ್ಯಮಗಳು ಅನುವಾದ'ವೆಂಬ ಬಹುಶಿಸ್ತೀಯ ನೆಲೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮಹತ್ವದ ಸಂಗತಿ, ವಿಷಯ, ಘಟನೆಯ ಕುರಿತು ಮಾಹಿತಿಯನ್ನು ಒದಗಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ, ಈ ಕೃತಿಯು ಉತ್ತಮ ಒಳನೋಟ ನೀಡುತ್ತದೆ.
©2024 Book Brahma Private Limited.