ಯುವ ಪತ್ರಕರ್ತೆ ಅಭಿಲಾಷಾ ಆರ್ ಅವರ ’ ಭಾರತದ ಜ್ವಲಂತ ಸಮಸ್ಯೆಗಳು ಮತ್ತು ಮಾಧ್ಯಮ’ ಕೃತಿಯು ಪ್ರಸ್ತುತ ಭಾರತ ಎದುರಿಸುತ್ತಿರುವ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿದಾಗ ಪ್ರಜಾಪ್ರಭುತ್ವ ಆತಂಕಕ್ಕೆ ಒಳಗಾದಂತೆ ಕಾಣುತ್ತದೆ. ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕ. ಜಗತ್ತಿನ ಮತ್ತು ಭಾರತದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಯನ್ನು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಇವೆಲ್ಲವುಗಳ ಹಿನ್ನೆಲೆಯಾಗಿ ಇಲ್ಲಿರುವ ಅನೇಕ ಪ್ರಬಂಧಗಳು ಬಹಳ ಪ್ರಮುಖವಾಗಿದೆ.
ದೇಶ ಎದುರಿಸಿದ ಅನಕ್ಷರತೆಯ ಸವಾಲು, ಬಡತನ ನಿವಾರಣೆಯ ಗತಿ ಸಾಲದು, ಮೂಢ ನಂಬಿಕೆಗಳ ನಿರ್ಮೂಲನೆ ಸಾಧ್ಯವೇ?, ಕೃಷಿ ಬಿಕ್ಕಟ್ಟಿಗೆ ಪರಿಹಾರ ಸಾಧ್ಯ, ಬಲಗೊಳ್ಳಬೇಕಿದೆ ಸಮುದಾಯ ಆರೋಗ್ಯ, ನಿರುದ್ಯೋಗ ನಿವಾರಣೆಗೆ ಆದ್ಯತೆ ಅಗತ್ಯ, ಇಂಧನ ಬಿಕ್ಕಟ್ಟು ಅಭಿವೃದ್ದಿಗೆ ಮಾರಕ, ಪರಿಸರ ಮಾಲಿನ್ಯ- ಜೀವ ಜಗತ್ತಿನ ಅಳಿವು ಉಳಿವಿನ ಸವಾಲು ಮುಂತಾದ ಪ್ರಮುಖ ಲೇಖನಗಳು ಇಲ್ಲಿವೆ.
©2024 Book Brahma Private Limited.