ಇದು ಪತ್ರಕರ್ತರಾಗಿ, ಅಂಕಣಕಾರರಾಗಿ ಈಗಲೂ ಸಕ್ರಿಯವಾಗಿದ್ದುಕೊಂಡು ಬರೆಯುವ ಶೂದ್ರ ಅವರ ಇನ್ನೊಂದು ಮುಖ್ಯ ಕೃತಿ. ಹಲವು ವಿಶಿಷ್ಟ ವ್ಯಕ್ತಿತ್ವಗಳನ್ನು ಶೂದ್ರರು ಗುರುತಿಸಿ ಅವರನ್ನು ಮಮತೆಯ ಕಣ್ಣುಗಳಲ್ಲಿ ಕಟ್ಟಿಕೊಡುತ್ತಾರೆ. ಶೂದ್ರ, ಗೋರೂರು, ಮೂರ್ತಿರಾಯರು, ಡಾವಿ, ರಾಜಾಜಿ, ಬಿ. ವಿ. ಕಾರಂತ, ಖಾಸನೀಸ, ಮಾಸ್ತಿ, ದೇಸಾಯಿ ಹೀಗೆ ಸೃಜನಶೀಲ ಜಗತ್ತನ್ನು ತಮ್ಮ ಬೊಗಸೆಯಲ್ಲಿ ತುಂಬಿಕೊಡುವ ಕೆಲಸ ಮಾಡುತ್ತಾರೆ. ಗೊರೂರರ ಸರಳತೆ ಮತ್ತು ಸಾಮಾನ್ಯತೆ, ಮೂರ್ತಿರಾಯರ ಬರಹ, ಬದುಕಿನ ಸೌಂದರ್ಯ, ಗಾಂಧಿಬಜಾರು ಮತ್ತು ಸಾಹಿತ್ಯಲೋಕದ ಅದರ ನಂಟು, ವರ್ತಮಾನವನ್ನು ಕಾಯುತ್ತಿರುವ ಗಂಗೂಬಾಯಿಯವರ ಹಾಡು ಮತ್ತು ಬದುಕು, ಉದಯರವಿ ಕುವೆಂಪು ಅವರ ಮನೂಲೋಕದ ಕಡೆಗೆ ತೆರೆದ ಬಾಗಿಲ ವ್ಯಾಪಕತೆ, ಕಾಲಕ್ಕೆ ಮಹತ್ವ ಕೊಟ್ಟ ಕಾರಂತರ ವಿಶಿಷ್ಟ ವ್ಯಕ್ತಿತ್ವ, ಬೇಂದ್ರೆಯ ಸಾಧನ ಕೇರಿ, ಡಾವಿನ್ಸಿಯ ಭವ್ಯತ... ಶೂದ್ರರು ಬರೆಯುತ್ತಾ ಹೋದಂತೆ ನಾವು ಆ ಬೇರೆ ಬೇರೆ ವ್ಯಕ್ತಿತ್ವದೊಳಗೆ ಕಳೆದು ಹೋಗಿ ಬಿಡುತ್ತೇವೆ.
©2025 Book Brahma Private Limited.