ಲೇಖಕ ಎನ್.ಭಾಸ್ಕರ ಆಚಾರ್ಯ ಅವರ ‘ಸ್ಥಿತಿ ಗತಿ’ ಕೃತಿಯು ಸಾಹಿತ್ಯ ಸಂಸ್ಕೃತಿಗೆ ಮೀಸಲಾದ ತ್ರೈಮಾಸಿಕವಾಗಿದೆ. ಸಾಹಿತ್ಯ, ಕಲೆ ಸಂಸ್ಕೃತಿಗೊಂದು ಕೈಗನ್ನಡಿಯಾಗಿರುವ ಈ ಕೃತಿಯು ಕನ್ನಡ -ಇಂಗ್ಲಿಷ್ ಲೇಖನಗಳನ್ನು ಒಳಗೊಂಡಂತಹ ದ್ವಿಭಾಷಾ ತ್ರೈಮಾಸಿಕವಾಗಿದೆ. ಕನ್ನಡ ವಿಭಾಗದಲ್ಲಿ 42 ಅಧ್ಯಾಯಗಳಿವೆ. ಚಡಗ ಕಾದಂಬರಿ ಸ್ಪರ್ಧೆ-2021, ತೀರ್ಪುಗಾರರ ಟಿಪ್ಪಣಿಗಳು (ಬೆಳಗೋಡು ರಮೇಶ ಭಟ್), ಪುಸ್ತಕ ಪರಿಚಯ ವಿಭಾಗದಲ್ಲಿ ಅಭ್ಯಾಸ ಪ್ರಯೋಗ ಪರಿಣಾಮ- 4 ಕೃತಿಗಳು (ಡಾ. ಕೆ ಸುಶೀಲಾ), ಕುಂದ್ರಾಪ ಕನ್ನಡ ನಿಘಂಟು, ನನ್ನದೇ ಆಕಾಶ ನನ್ನದೇ ರೆಕ್ಕೆ, ಹರಿವ ಕಾವ್ಯ ಆಕಾಶದೀಪ (ಪ್ರೊ. ಚಿತ್ರಪಾಡಿ ಉಪೇಂದ್ರ), ಹೊಸ ಓದು- ಮರು ಓದು, ಮಾರ್ಗಾನ್ವೇಷಣೆ, ಭಾವ ತರಂಗಿಣಿ, ಚೆಲುವನೂರು, ಪ್ರೀತಿಗಿಂತ ದೊಡ್ಡದೇ, ಮಕ್ಕಳ ಸಾಹಿತ್ಯ, ಮದುವೆಯ ಕಥಾಪ್ರಸಂಗ, ನೆನಪಿನಾಳದಿಂದ (ಶಾರದಾ ಅಂಚನ್), ವರ್ಣಕ (ಬೆಳಗೋಡು ರಮೇಶ್ ಭಟ್), ಕವಿತೆ : ಸೈನಿಕರ ಈ ಸಾವು ನ್ಯಾಯವಲ್ಲ (ಜಿ. ಎಚ್. ಹನ್ನೆರಡುಮಠ), ಪ್ರೇಮದೊಳಗಿನ ಬದುಕು (ವಸಂತ ಕುಮಾರ ಎಸ್. ಕಡ್ಲಿಮಟ್ಟಿ), ಹೇಗಿರಬೇಕು ಮನೆಯ ವಾಸ್ತು (ವಾಟ್ಸಾಪ್ ಕೃಪೆ), ಅರ್ಕ ನಡೆದ ಕರ್ಕಕೆ (ಪ್ರಹ್ಲಾದ ಕುಷ್ಟಗಿ), ಲಲಿತ ಪ್ರಬಂಧ : ಶಿವ ಪಾರ್ವತಿ ಬಂದಿದ್ರು ಬೆಂಗ್ಳೂರಿಗೆ (ಪ್ರೊ. ಜಿ. ಹೆಚ್. ಹನ್ನೆರಡುಮಠ), ಕಥೆ : ಕಾದಿರುವೆ ಪವಾಡದ ನಿರೀಕ್ಷೆಯಲ್ಲಿ (ರಾಧಾ ರಮೇಶ್), ಪ್ರತಾಪ (ಯುಮುನಾ ಕಂಬಾರ್), ಗಾಂಧೀ ನೋಟು (ಬಿ. ಜಿ. ಸತ್ಯಮೂರ್ತಿ), ರಾಜನರ್ತಕಿ -ಆಮ್ರಪಾಲಿ (ಕಾವ್ಯರೂಪಾಂತರ), ಮಿದುಳು ನಿಷ್ಕ್ರಿಯತೆ (ಪಿ. ಎಸ್ ಶಂಕರ್), ಕೊರೋನಾ (ಕರೋ…ನಾ) ಚೌಚೌ ಭಾಗ (ಎನ್. ಭಾಸ್ಕರ ಆಚಾರ್ಯ), ಭಾರತೀಯ ವೈದ್ಯಕೀಯ ಸಂಘದ ಕನ್ನಡ ವೈದ್ಯೆ ಬರಹಗಾರರ ಬಳಗದ ಎರಡನೆಯ ರಾಜ್ಯಸಮ್ಮೇಳನದ ನಿರ್ಧಾರಗಳು ಮತ್ತು ಠರಾವುಗಳು, ಸಾಹಿತ್ಯಿಕ : ಅಲೆಅಲೆಯಾಗಿ, ನೆಲೆಯಾದ ರಾಮಾಯಣ (ಸಿ. ಎಸ್ ಶಾಸ್ತ್ರೀ), ನನ್ನ ಬಾಳ ಪುಟದಲ್ಲಿ ಒಂದು ತಿಂಗಳ ಕತೆ (ಸ್ವಾನುಭವದ ಮರುಚಿಂತನೆ, ವಬಿ. ಪಿ ಶಿವಾನಂದ ರಾವ್), ನೊಬೆಲ್ ಗರಿ (ಬಿ. ಎಂ. ನರಹಳ್ಳಿ), ನಿವೃತ್ತ ಪ್ರಾಧ್ಯಾಪಕರೊಬ್ಬರ ಜೀವಾನುನುಭವದ ದರ್ಶನ, ಹೇಳದೇ ಉಳಿದದ್ದು (ವಿ. ಚಿ. ಅರ್ತಿಕಜೆ), ಬೇಂದ್ರೆಯವರ ‘ಹೊಸಸಂಸಾರ’ ದತ್ತ ಒಂದು ಹೊರಳು ನೋಟ (ಎಚ್. ಆರ್. ಅಮರನಾಥ್), ಆತ್ಮಕಥನ : ನಾನು (ಅಧ್ಯಾಯ) -ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ, ವಾಟ್ಯಪ್ ಕೃಪೆ : ನಾನು ಅಧ್ಯಾಯ (ಅಮಾಸೆಬೈಲು ಗೋಪಾಲಕೃಷ್ಣ), ನಾಲ್ಕನೇ ವ್ಯಕ್ತಿ (ಜೆ. ಬಿ ಪ್ರಸಾದ್) ಹೀಗೆ ಇವೆಲ್ಲವನ್ನು ಒಳಗೊಂಡಿದೆ.
©2024 Book Brahma Private Limited.