ಮತ್ತಿಹಳ್ಳಿ ನಾಗರಾಜರಾವ್ ರವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ರಾಮಯ್ಯ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರು. ಲೇಖಕರು ಇಸ್ರೇಲ್ ಇತಿಹಾಸದ ಕುರಿತು ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ. ಇಸ್ರೇಲ್ ಮೆಡಿಟರೇನಿಯನ್ ಮತ್ತು ಸಮುದ್ರದ ಆಗ್ನೇಯಕ್ಕೆ ಪಶ್ಷಿಮ ಏಷ್ಯಾಕ್ಕೆ ಇರುವ ದೇಶ. ಹಿಟ್ಲರ್ ಕಾಲದಲ್ಲಿ ನಡೆದ ಮಾರಣವೋಮ ಅಲ್ಲಿನ ಕೆಲ ಜನರನ್ನು ಕೆರಳಿಸಿತು. ನಂತರ ಹಿಟ್ಲರ್ ಆಕ್ರಮಣ ಹೆಚ್ಚಾದಂತೆ ಅವರು ಅಲ್ಲಿಂದ ವಲಸೆ ಹೋಗಿ ಇಸ್ರೇಲ್ ನಲ್ಲಿ ನೆಲೆಸಿದರು. ಈ ಕೃತಿಯಲ್ಲಿ ಒಟ್ಟು ಇಸ್ರೇಲ್ ಚರಿತ್ರೆಯನ್ನು , ಸರ್ವಾಧಿಕಾರಿ ಹಿಟ್ಲರ್ ಧೋರಣೆಯನ್ನು ವಿವರಿಸಿದ್ದಾರೆ. ಬುದ್ದಿವಂತರೆಂದು,ಜಗತ್ತಿನ ಇತಿಹಾದಲ್ಲಿ ಶ್ರಮ ಜೀವಿಗಳೆಂದು ಅಪ್ಪಟ ರಾಷ್ಟ್ರ ಪ್ರೇಮಿಗಳೆಂದು, ಜ್ಞಾನಿಗಳೆಂದು ಹಲವು ಇತಿಹಾಸಕಾರರು ಬಣ್ಣಿಸಿರುವ ಯಹೂದಿಗಳು ಹಿಟ್ಲರ್ ನ ಕ್ರೂರತೆಗೆ ದಮನಕ್ಕೆ ಒಳಗಾದವರು. ಕೊನೆಗೆ ಎಲ್ಲವನ್ನು ಕಳೆದುಕೊಂಡ ಯಹೂದಿಗಳು ಅಲ್ಲಿಂದ ವಲಸೆ ಹೋಗಿ ಇಸ್ರೇಲ್ ನಲ್ಲಿ ನೆಲೆಸಿದರು. ನಂತರ ಇಡೀ ಜಗತ್ತಿನ ಚಿತ್ತವು ಇಸ್ರೇಲ್ ನತ್ತ ನೋಡುವಂತೆ ಕೇವಲ 50 ವರ್ಷಗಳಲ್ಲಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತ ಇಸ್ರೇ ಲ್ ಚರಿತ್ರೆಯ ಬಗ್ಗೆ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.