ವೈಜ್ಞಾನಿಕ ಮನೋಪ್ರವೃತ್ತಿ ದೈನಂದಿನ ಬದುಕಿನ ಒಂದು ಭಾಗವಾಗುವಂತೆ ಮಾಡುವ ಮಹತ್ವದ ಜವಾಬ್ದಾರಿ ಮಾಧ್ಯಮ ಕ್ಷೇತ್ರಕ್ಕಿದ್ದು, ಇಂದು ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಹೆಚ್ಚು ಒತ್ತು ಕೊಡುತ್ತಿವೆ. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋವೃತ್ತಿಯ ಬೆಳೆಸುವತ್ತ ಮಾಧ್ಯಮಗಳು ಕೆಲಸ ಮಾಡಿದರೆ ಸಶಕ್ತ ಭಾರತವು ನಿರ್ಮಾಣಗೊಳ್ಳಲು ಸಾಧ್ಯ. ಆದರೆ ಈ ಕಾರ್ಯವನ್ನು ನಿಭಾಯಿಸುವಲ್ಲಿ ಇಂದು ಟೆಲಿವಿಷನ್ ಮಾಧ್ಯಮಗಳು ಯಾವುದೇ ರೀತಿಯ ಸಾಮಾಜಿಕ ಬದ್ಧತೆಯೂ ಇಲ್ಲದೆ ವೈಜ್ಞಾನಿಕ ಮನೋಭಾವಗಳನ್ನು ಬೆಳೆಸುವಂತಹ ಕಾರ್ಯಕ್ರಮಗಳ ಬದಲಿಗೆ ಟಿ.ಆರ್.ಪಿಯ ಬೆನ್ನು ಹತ್ತಿ ರೋಚಕ ಸುದ್ದಿಗಳೊಂದಿಗೆ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಅದರ ತಡೆಗೆ ಸೂಕ್ತ ಕಾನೂನಿನ ಕಡಿವಾಣದ ಅವಶ್ಯಕತೆ ಹಾಗೂ ತಡೆಯುವ ಮಾಹಿತಿ ಕುರಿತು ಲೇಖಕರು ಇಲ್ಲಿ ಚರ್ಚಿಸಿದ್ದಾರೆ.
©2024 Book Brahma Private Limited.