‘ಮಾಧ್ಯಮ ಭಾಷಾ ದೀಪಿಕೆ’ ಕೃತಿಯು ಪದ್ಮರಾಜ ದಂಡಾವತಿ ಅವರ ಪತ್ರಿಕೋದ್ಯಮ ಕುರಿತ ಲೇಖನಸಂಕಲನಾಗಿದೆ. ಭಾಷಾ ಬಳಕೆ ಕುರಿತಾಗಿ ಅವರಿಗಿರುವ ಅನುಭವ ಹಾಗೂ ಜ್ಞಾನ ಇವೆರಡನ್ನೂ ಸೇರಿಸಿ ಕೃತಿಯನ್ನು ರಚಿಸಲಾಗಿದೆ. ಭಾಷೆಯ ಮೇಲೆ ದಂಡಾವತಿ ಅವರು ಹೊಂದಿರುವ ಪ್ರೀತಿ, ಕಕ್ಕುಲಾತಿ ಪ್ರಶ್ನಾತೀತ. ಒಂದು ಪತ್ರಿಕೆ ಆಕರ್ಷಕ ಎನಿಸುವುದು ಅದರ ಶೀರ್ಷಿಕೆಗಳಿಂದ. ಜನರು ಪತ್ರಿಕೆಯನ್ನು ಶೀರ್ಷಿಕೆ ನೋಡಿಯೇ ಕೊಳ್ಳುತ್ತಾರೆ ಎಂಬ ಮಾತು ಇದೆ. ಸಂಜೆ ಪತ್ರಿಕೆಗಳಂತೂ ಕೇವಲ ಇಂಥ ಆಕರ್ಷಕ ಮತ್ತು ರೋಚಕ ಶೀರ್ಷಿಕೆಗಳನ್ನು ನಂಬಿಕೊಂಡೇ ಪತ್ರಿಕೆಯನ್ನು ಮಾಡುತ್ತವೆ ಎಂಬ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ನಿವೃತ್ತರಾದ ಮೇಲೂ ಬದ್ಧತೆಯಿಂದ ಈ ದೀಪಿಕೆಯನ್ನು ರೂಪಿಸಿರುವುದಕ್ಕೆ ಅವರ ಪ್ರೀತಿ, ಕಕ್ಕುಲಾತಿಯೇ ಕಾರಣ ಎಂಬುವುದನ್ನು ನಾವು ಇಲ್ಲಿ ಕಾಣಬಹುದು.
©2024 Book Brahma Private Limited.