ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಅವರ ಕೃತಿ-ಟಿ.ವಿ. ಮಾಧ್ಯಮದಲ್ಲಿ ದುಡಿವ ಮಹಿಳೆ. ಕಾರ್ಮಿಕ ವರ್ಗ ವಿಶೇಷವಾಗಿ ಮಹಿಳೆಯರ ಶೋಷಣೆ ಕುರಿತು ಚರ್ಚಿಸುವ ಮಾಧ್ಯಮವು ತನ್ನದೇ ಕಕ್ಷೆ ಒಳಗೆ ಮಹಿಳಾ ಸಹೋದ್ಯೋಗಿಗಳನ್ನು, ಕೆಲಸಗಾರರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಸಂಕ್ಷಿಪ್ತ ಆದರೆ ಗಂಭೀರ ಆಯಾಮಗಳನ್ನು ಎತ್ತಿಕೊಂಡು ಚಿಂತನೆಗೊಳಪಡಿಸಿದ ಕೃತಿ. ಭಾರತೀಯ ಸಂವಿಧಾನದಲ್ಲಿ ವಿಶೇಷ ಸ್ಥಾನ ಪಡೆದ ಮಾಧ್ಯಮದಲ್ಲಿ ಮಹಿಳೆಯರ ಹಕ್ಕು ಹಾಗೂ ಕರ್ತವ್ಯವಗಳ ಮೊಟಕಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳಿಂದ ಮಹಿಳೆಯರು ನಲಗುತ್ತಿರುವ ಕುರಿತ ಪಾರ್ಶ್ವ ನೋಟ ಇಲ್ಲಿದೆ. ದಿನದ 24 ಗಂಟೆಯ ಕೆಲಸದ ಒತ್ತಡದ ಅನಿವಾರ್ಯತೆ ಇದ್ದರೂ ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಇಂದಿಗೂ ಸೂಕ್ತ ಯೋಜನೆ-ಯೋಚನೆ ಇಲ್ಲದಿರುವ ಇಂದಿನ ಮಾಧ್ಯಮದ ದೋಷಗಳನ್ನು ಕಾಣಿಸಲಾಗಿದೆ.
©2025 Book Brahma Private Limited.