ಲೇಖಕ ಶ್ರೀನಿವಾಸ ಜೋಕಟ್ಟೆ ಬರೆದ ಕಥಾ ಸಂಕಲನ ’ನೇರ ಪ್ರಸಾರ ಮತ್ತು ಚಿಕ್ಕವಿರಾಮ’.ಸುಖ ಮತ್ತು ದುಃಖ ಎರಡೂ ಮುಖಾಮುಖಿಯಾದಾಗ ನಡೆಯುವ ಮಥನವೇ ಇಲ್ಲಿನ ಕಥಾವಸ್ತು. ಜೋಕಟ್ಟೆ ಅವರ ಇಲ್ಲಿನ ಅಷ್ಟೂ ಕತೆಗಳು ಅವರ ಅನುಭವಾಮೃತದ ಮೂಲಕ ಮೂಡಿವೆ.
ಒಟ್ಟು ಇಪ್ಪತ್ತೆಂಟು ಕತೆಗಳಿರುವ ಕೃತಿ ತನ್ನ ಸರಳ ಸುಂದರ ನಿರೂಪಣೆಯ ಕಾರಣಕ್ಕೆ ಗಮನ ಸೆಳೆಯುತ್ತದೆ. ಓದುಗರದೇ ಸ್ವಂತ ಅನುಭವ ಎಂದು ಭಾಸವಾಗುವಂತೆ ಕತೆಗಾರರಿಂದ ಇಲ್ಲಿನ ಕತೆಗಳ ಸೃಷ್ಟಿಕಾರ್ಯ ನಡೆದಿದೆ.
ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದಂತ ಈ ಕಥಾ ಸಂಕಲನ ನೇರ ಪ್ರಸಾರ ಮತ್ತು ಚಿಕ್ಕವಿರಾಮ ಹೆಸರು ಸೂಚಿಸುವಂತೆ ನೇರವಾಗಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದಂತಹ ಲೇಖನಗಳನ್ನು ಕಥಾ ಸಂಕಲನವಾಗಿ ಪರಿಚಯಿಸಿದ್ದಾರೆ. ಈ ಕಥಾ ಸಂಕಲನದಲ್ಲಿ ಲೇಖಕರು ತಮ್ಮ ಜೀವನದಲ್ಲಿನ ಕೆಲವು ಸುಖಕರ ಮತ್ತು ದುಖಕರ ಸಂಗತಿಗಳು ಮತ್ತು ಸ್ನೇಹಿತರ ಜೋತೆಯಲ್ಲಿನ ಅನುಭವಗಳು ವಿವಿಧ ಹೆಸರಿನಲ್ಲಿ ಕಥೆಗಳನ್ನು ಚಿತ್ರಸಿದ್ದಾರೆ, ಅಷ್ಟೆ ಅಲ್ಲದೆ ಪ್ರಯಾಣದ ವೇಳೆ ಹಲವು ನಗರಗಳಲ್ಲಿ ಆಕಸ್ಮಿಕವಾಗಿ ಅನುಭವಿಸಿದ ಸಂಗತಿಗಳು ಮತ್ತು ಕುಟುಂಬದ ಜೊತೆಯಲ್ಲಿ ಅನುಭವಿಸಿದ ಸಂಗತಿಗಳು ಮತ್ತು ಪ್ರೀತಿಯ ಸಂಗತಿಗಳನ್ನು ಇಲ್ಲಿ ಕಾಣಬಹುದು.ಸರಳ ಭಾಷಾ ಶೈಲಿಯನ್ನು ಹೊಂದಿದ ಈ ಪುಸ್ತಕವು 28 ಆಯ್ದ ಕಥೆಗಳನ್ನು ಹೊಂದಿದ್ದು ಓದಿನ ಆಸಕ್ತಿಯನ್ನು ಹೆಚ್ಚಿಸಿ ಒಂದೊಂದು ಕಥೆಯಲ್ಲಿನ ಸಂಗತಿಗಳು ಸ್ವತಃ ನಾವೆ ಅನುಭವಿಸಿದಂತೆ ನಮ್ಮದೆ ಜೀವನದ ಸಂಗತಿಗಳಂತೆ ಭಾಸವಾಗುತ್ತದೆ. ಈ ಪುಸ್ತಕವು ನಿಜ ಜೀವನಕ್ಕೆ ಹಿಡಿದ ಕೈಕನ್ನಡಿಯಾಗಿದೆ ಎಂದು ಹೇಳಬಹದು.
ಕೃಪೆ: ಪ್ರಜಾವಾಣಿ
https://www.prajavani.net/artculture/book-review/pustaka-vimarse-647658.html
©2024 Book Brahma Private Limited.