ಹೈದರಾಬಾದ ಕರ್ನಾಟಕ ಸಮೂಹ ಮಾಧ್ಯಮ

Author : ಶಿವರಾಮ ಅಸುಂಡಿ

Pages 140

₹ 100.00




Year of Publication: 2010
Published by: ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಕಲಬುರಗಿ
Phone: 9448124431

Synopsys

ಹೈದರಾಬಾದ್ ಕರ್ನಾಟಕ ಹಿಂದುಳಿದ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹೊರಟ ಭಾಗ. ಈ ಹೈದರಾಬಾದ್ ಕರ್ನಾಟಕಕ್ಕೂ ತನ್ನದೇ ಆದ ಇತಿಹಾಸವಿದೆ, ತನ್ನದೇ ಆದ ಸಾಂಸ್ಕೃತಿಕ ವೈಭವವೂ ಇದೆ. ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಆದರೆ ಈ ಭಾಗದ ಚರಿತ್ರೆ ದಾಖಲೀಕರಣ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಾಧ್ಯಮ ಕ್ಷೇತ್ರವೂ ಅದಕ್ಕೆ ಹೊರತಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಹೈದರಾಬಾದ್ ಕರ್ನಾಟಕದ ಮಾಧ್ಯಮ ಚರಿತ್ರೆ ಕಟ್ಟಿಕೊಡುವ ಪ್ರಥಮ ಪ್ರಯತ್ನ ಈ ಕೃತಿ ಮೂಲಕ ನಡೆದಿದೆ. ಹೈ.ಕ. ಭಾಗದ(ಕಲಬುರ್ಗಿ ವಿಭಾಗದ) ಆರು ಜಿಲ್ಲೆಗಳ ಮಾಧ್ಯಮ ಚರಿತ್ರೆಯ ಪರಿಚಯ ಕೃತಿಯಲ್ಲಿದೆ. ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಹುಟ್ಟು, ಬೆಳವಣಿಗೆ ಇತ್ಯಾದಿಗಳ ಪರಿಚಯವನ್ನು ಮಾಡಲಾಗಿದೆ.

About the Author

ಶಿವರಾಮ ಅಸುಂಡಿ

ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ.  ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...

READ MORE

Related Books