ಕೇಳುವ ಕೌತುಕ ಮಾಧ್ಯಮಲೋಕದ ರಸನಿಮಿಷಗಳು

Author : ಸಿ. ಯು. ಬೆಳ್ಳಕ್ಕಿ

Pages 200

₹ 175.00

Buy Now


Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು.

Synopsys

ಬಾನುಲಿಯು ಒಂದು ಪ್ರಮುಖ ಸಮೂಹ ಮಾಧ್ಯಮ. ಆಕಾಶವಾಣಿಯ ಆರಂಭದ ದಿನಗಳಿಂದ ಮೊದಲ್ಗೊಂಡು ಈ ತನಕ ಆಗಿರುವ ವಿದ್ಯುನ್ಮಾನ ಮಾಧ್ಯಮದ ಅತ್ಯಾಧುನಿಕ ವಿಕಾಸದ ಹೆಜ್ಜೆ ಗುರುತುಗಳನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.ತಮ್ಮ ಮೂರು ದಶಕಗಳ ವೃತ್ತಿಜೀವನದ ಆಗುಹೋಗುಗಳನ್ನು, ಏಳುಬೀಳುಗಳನ್ನು, ವಿನೋದ, ವಿಷಾದಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.ಖಾಸಗಿ ಎಫ್.ಎಂ ಕೇಂದ್ರಗಳ ನಡುವಿನ ಪೈಪೋಟಿಯನ್ನು ವಿವರಿಸಲಾಗಿದೆ.ಬಾನುಲಿಯ ಮೂಲಕ ಖ್ಯಾತನಾಮರಾದವರ ವ್ಯಕ್ತಿ ಚಿತ್ರಣ, ಅವರ ಸಾಧನೆಯ ವೈಶಿಷ್ಟ್ಯತೆಗಳನ್ನು ಕೃತಿಯಲ್ಲಿ ಸೇರಿಸಲಾಗಿದೆ.

About the Author

ಸಿ. ಯು. ಬೆಳ್ಳಕ್ಕಿ

ಆಕಾಶವಾಣಿಯಲ್ಲಿ ವೃತ್ತಿನಿರತರಾಗಿದ್ದ ಸಿ.ಯು. ಬೆಳ್ಳಕ್ಕಿಯವರು ಪ್ರವೃತ್ತಿಯಲ್ಲಿಯೂ ಮಾಧ್ಯಮವನ್ನು ಪ್ರೀತಿಸಿದವರು. ಧ್ವನಿ ಮಾಧ್ಯಮದ ನೂರು ಸಾಧ್ಯತ್ಯೆಗಳ ಬಗ್ಗೆ ಪ್ರಯೋಗಶೀಲರಾಗಿದ್ದಾಗಲೇ ಗಾಳಿಯಲ್ಲಿ ತೇಲಿದ  ಮಾತುಗಳನ್ನು ಅಕ್ಷರರೂಪದಲ್ಲಿ ದಾಖಲಿಸಿದವರು. ಅನೇಕ ಪ್ರಸಾರಕರನ್ನು ಮಾರ್ಗದರ್ಶನ ನೀಡಿ ಬೆಳೆಸಿದರು. ಬಾನುಲಿಯ ಕುರಿತಾಗಿ ಕನ್ನಡದಲ್ಲಿ ಇವರಷ್ಟು ನಿರಂತರವಾಗಿ ಬರೆಯುತ್ತಾ ಬಂದವರು ಮತ್ತೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅಂತೆಯೇ ಬಾನುಲಿಯ ವಿವಿಧ ವಿಭಾಗಗಳಲ್ಲಿ ಅಧ್ಯಯನ ಹಾಗೂ ಅಭಿವ್ಯಕ್ತಿ ಬೆಳೆಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ವಿಶ್ರಾಂತ ಬದುಕಿನಲ್ಲೂ ವೃತ್ತಿಯ ನಂಟನ್ನು ನಿರ್ಲಕ್ಷಿಸದೆ ಮಾತಿನ ಮನೆಯ ಬೆರಗನ್ನು ಕೇಳುವ ಕೌತುಕವಾಗಿ ಲಿಪಿಬದ್ಧಗೊಳಿಸಿದ್ದಾರೆ. ಅಲ್ಲದೇ ಮಾಧ್ಯಮಲೋಕದ ಕುರಿತಾಗಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books