'ಸುದ್ದಿ ಮಾಧ್ಯಮ ಮತ್ತು ಮಹಿಳೆ' ಜ್ಯೋತಿ ಇರ್ವತ್ತೂರು ಅವರ ಕೃತಿಯಾಗಿದೆ. ಸಮಾನತೆಯನ್ನು ತರುವಲ್ಲಿಯೂ ಪ್ರಮುಖವಾದುದು. ಯೋಚಿಸುವ ಬಗೆ ಬದಲಾಗಲು ವಸ್ತುಸ್ಥಿತಿಯನ್ನು ಮನದಟ್ಟು ಮಾಡಬೇಕಾಗುತ್ತದೆ. ಹಾಗಾಗಿ ಈಗಾಗಲೇ ಯಾವುದೇ ಅನುಭವ ಅಥವಾ ಪೂರ್ವಾಗ್ರಹ ಚಿಂತನೆಯ ಆಧಾರದ ಮೇಲೆ ಹರಿದು ಬರುವ ಯೋಚನಾ ರೀತಿಯ ದಿಕ್ಕನ್ನು ಬದಲಿಸಬೇಕಾಗುತ್ತದೆ. ಇನ್ನು ಒಟ್ಟಾರೆ ಈ ಪುಸ್ತಕದಲ್ಲಿ ನಾನು ಹೇಳಲು ಅಥವಾ ಉಲ್ಲೇಖಿಸಲು ಹೊರಟಿರುವುದು ಪತ್ರಕರ್ತೆಯರ ಸ್ಥಿತಿಗತಿ, ಪತ್ರಕರ್ತೆಯರ ಕುರಿತಂತೆ ತಾರತಮ್ಯದ ಧೋರಣೆಯನ್ನು ಅನುಸರಿಸಲಾಗುತ್ತಿದೆಯೇ? ಆಗುತ್ತಿದ್ದರೆ ಯಾವ ರೀತಿಯಲ್ಲಿ ಮತ್ತು ಸ್ವಂತ ಅನುಭವದ ಮೇಲೆ ಆ ಕಹಿ ಘಟನೆಯನ್ನು ಪತ್ರಕರ್ತೆಯರು ವ್ಯಕ್ತಪಡಿಸಿರುವ ಸ್ವಂತ ಉದಾಹರಣೆಗಳನ್ನು ಕೊಡುವ ಮೂಲಕ ವಾಸ್ತವ ಪರಿಸ್ಥಿತಿಯನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಆಗ ನಿಜವಾಗಿಯೂ ಪತ್ರಕರ್ತೆಯರು ವೃತ್ತಿ ಬದುಕಿನಲ್ಲಿ ಸಾಗುತ್ತಿರುವ ದಿಕ್ಕು, ದಿಸೆ, ಸವಾಲು, ಸಂಕಷ್ಟ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ.
©2024 Book Brahma Private Limited.