ನುಡಿಚಿತ್ರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕನ್ನಡದಲ್ಲಿ ಮೊದಲ ಪುಸ್ತಕ ಬರೆದವರು ನಿರಂಜನವಾನಳ್ಳಿ. ನುಡಿಚಿತ್ರಕಲೆಗೊಂದು ದಿಕ್ಸೂಚಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ (1993) ಪಡೆದಿದ್ದಾರೆ. ನಿರಂಜನವಾನಳ್ಳಿಯವರು ವಿಶ್ವವಿದ್ಯಾನಿಲಯದಲ್ಲಿ ನುಡಿಚಿತ್ರದ ಪಾಠ ಮಾಡುತ್ತಿದ್ದಾರೆ ಹಾಗೂ ಕನ್ನಡ ಪತ್ರಿಕೆಗಳಿಗೆ ನುಡಿಚಿತ್ರ ಬರೆಯುತ್ತಿದ್ದಾರೆ. ನುಡಿಚಿತ್ರದ ಸಿದ್ದಾಂತ ಮತ್ತು ಪ್ರಯೋಗಗಳ ಬಗ್ಗೆ ಕನ್ನಡದಲ್ಲಿ ಬರೆದಿದ್ದಾರೆ. ಅವರ ಓದು ಮತ್ತು ಅನುಭವದ ಫಲವೇ ಈ ಕೃತಿ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಪತ್ರಿಕಾ ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆಲ್ಲ ಇದು ಮಾರ್ಗದರ್ಶಿ. ಈ ಪುಸ್ತಕದ ವಿಶೇಷವೆಂದರೆ ನುಡಿಚಿತ್ರದ ಬಗ್ಗೆ ಹೇಳುವುದಷ್ಟೇ ಅಲ್ಲ, ತಾವೇ ಬರೆದ ನುಡಿಚಿತ್ರಗಳ ಆಧಾರದಲ್ಲಿ ಬರವಣಿಗೆಯನ್ನು ಕಲಿಸುತ್ತಾರೆ. ಇಲ್ಲಿನ ಎಷ್ಟೋ ನುಡಿಚಿತ್ರಗಳು ವಸ್ತು, ಭಾಷೆ, ಬರವಣಿಗೆಯ ಲಾಲಿತ್ಯದ ದೃಷ್ಟಿಯಿಂದ ಎಲ್ಲ ಕಾಲಕ್ಕೂ ಸಲ್ಲುವ ಅನನ್ಯ ಮಾದರಿಗಳಾಗಿವೆ.
©2025 Book Brahma Private Limited.