ಲೇಖಕ-ಚಿಂತಕ ಡಾ. ಅಮ್ಮಸಂದ್ರ ಸುರೇಶ ಅವರು ಮಾಧ್ಯಮಗಳ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಆಯಾಮಗಳ ಕುರಿತು ಬರೆದ ಕೃತಿ-ಅಭಿವೃದ್ಧಿಗಾಗಿ ಸಂವಹನ. ಅಭಿವೃದ್ಧಿ ಸಂವಹನದ ಹುಟ್ಟು, ಬೆಳವಣಿಗೆ, ಪ್ರಸ್ಥುತ ಸಂದರ್ಭದಲ್ಲಿ ಅದರ ಪ್ರಾಮುಖ್ಯತೆ ಕುರಿತು ಸಂಪೂರ್ಣ ವಿವರಗಳನ್ನು ಒದಗಿಸುತ್ತದೆ. ಭಾರತದಲ್ಲಿ ಮಾಧ್ಯಮಗಳ ಬೆಳವಣಿಗೆ ಅವುಗಳ ಇಂದಿನ ಅವಶ್ಯಕತೆ, ಸಾಮಾಜಿಕ ಮಾಧ್ಯಮಗಳೂ ಒಳಗೊಂಡಂತೆ ಅಭಿವೃದ್ಧಿಗಾಗಿ ಸಂವಹನದಲ್ಲಿ ವಿವಿಧ ಮಾಧ್ಯಮಗಳ ಪಾತ್ರವನ್ನು ಕುರಿತು ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲಾಗಿದೆ. ಒಟ್ಟು 9 ಅಧ್ಯಾಯಗಳನ್ನು ಒಳಗೊಂಡ ಈ ಕೃತಿಯು, ಅಭಿವೃದ್ಧಿ ಸಂವಹನ, ಅಭಿವೃದ್ಧಿ ಬೆಂಬಲಿತ ಸಂವಹನ, ಆಭಿವೃದ್ಧಿಗಾಗಿ ಸಂವಹನ, ಭಾರತದಲ್ಲಿ ಉಪಗ್ರಹ ಸಂವಹನ, ಭಾರತದಲ್ಲಿ ವಿವಿಧ ಅಭಿವೃದ್ಧಿ ಸಂವಹನ ಪ್ರಯೋಗಗಳ ಕುರಿತ ವಿವರಗಳಿವೆ. ಪತ್ರಿಕೋದ್ಯಮ ಮತ್ತು ಮಾಧ್ಯಮ ವಿದ್ಯಾರ್ಥಿಗಳು, ಮಾಧ್ಯಮ ಕ್ಷೇತ್ರದ ವೃತ್ತಿಪರರು ಮತ್ತು ಸಂಶೋಧಕರಿಗೆ ಈ ಕೃತಿಯು ಉತ್ತಮ ಪರಾಮರ್ಶನ ಕೃತಿಯಾಗಿದೆ.
©2024 Book Brahma Private Limited.