ಯಲ್ಲಂಪಲ್ಲಿ ವಿ. ಅಮರನಾಥರ ಮೊದಲ ಕೃತಿ ‘ನ್ಯೂಸ್ ಫ್ಯಾಕ್ಟರಿ’. ಮುದ್ರಣ ಹಾಗೂ ವಿದ್ಯುನ್ಮಾನ ಸಂಸ್ಥೆಗಳಲ್ಲಿ ಕೆಲಸ ಮಾಡಲು ಬರುವವರಿಗೆ ಉಪಯುಕ್ತ ಕೃತಿ ಇದಾಗಿದ್ದು ನ್ಯೂಸ್ ರೂಂ ದಿನಚರಿ, ನ್ಯೂಸ್ ಡೆಸ್ಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮಾಹಿತಿ ಕೊಡುವ ವಿಧಾನಗಳು, ಸುದ್ದಿ ಬರೆಯುವ ವಿಧಾನಗಳು, ಎವಿ (Anchor & Visual) ಬರೆಯೋದು ಹೇಗೆ..?, ಪ್ಯಾಕೇಜ್ ಬರೆಯುವುದು ಹೇಗೆ..?, ಸುದ್ದಿ ವಾಚಕರು ಹಾಗೂ ನಿರೂಪಕರಿಗೆ ಇರಬೇಕಾದ ಅರ್ಹತೆಗಳ, ಇವುಗಳ ಬಳಕೆ ಯಾಕೆ..? ಏನು ಇದರ ಅರ್ಥ..?, ಯಾವ ಪದ ಹೇಗೆ ಬಳಸಬೇಕು..?, ಬೇಸಿಕ್ ಲೈಟಿಂಗ್ ಟೆಕ್ನಿಕ್ ಮುಂತಾದ ಲೇಖನಗಳನ್ನು ಇಲ್ಲಿ ಕಾಣಬಹುದು.
ನ್ಯೂಸ್ ಫ್ಯಾಕ್ಟರಿ’ ಕೃತಿಯ ಕುರಿತು ಪತ್ರಕರ್ತ, ಲೇಖಕ ಯಲ್ಲಂಪಲ್ಲಿ ವಿ. ಅಮರನಾಥ ಅವರ ಮಾತುಗಳು ಇಲ್ಲಿವೆ.
©2024 Book Brahma Private Limited.