ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಸುವರ್ಣ ಮಹೋತ್ಸವ, ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಹಾಗೂ ವೇದ ಮಹಾಪಾಠಶಾಲೆಗಳ ವಜ್ರ ಮಹೋತ್ಸವ ಮತ್ತು ಶ್ರೀ ಸಿದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯದ ವಜ್ರ ಮಹೋತ್ಸವ ಪ್ರಯುಕ್ತ ಸಂಯುಕ್ತವಾಗಿ ಮಠದ ಹಳೆಯ ವಿದ್ಯಾರ್ಥಿಗಳ ಸಂಘವು ‘ಸಿದ್ಧಗಂಗಾ ಶ್ರೀ’ ಎಂಬ ಬೃಹತ್ ಗ್ರಂಥವನ್ನು ಪ್ರಕಾಶಿಸಿದೆ. ಇದರ ಸಂಪಾದಕರು-ಪಂಡಿತ ಚನ್ನಪ್ಪ ಎರೇಸೀಮೆ ಹಾಗೂ ಟಿ.ಆರ್. ಮಹಾದೇವಯ್ಯ.
ಈ ಮಹಾಸಂಪುಟದಲ್ಲಿ ಐದು ವಿಭಾಗಗಳಿವೆ. ‘ಶ್ರೀ ಕ್ಷೇತ್ರ’-ವಿಭಾಗದಲ್ಲಿ ಕ್ಷೇತ್ರದ ಐತಿಹಾಸಿಕ ಮಹತ್ವ ವಿವರಿಸಿದೆ. ‘ ದರ್ಶನ ಶ್ರೀ’ ವಿಭಾಗದಲ್ಲಿ, ವಿಶ್ವದ ಪ್ರಮುಖ ಧರ್ಮಗಳು, ವೀರಶೈವ ಧರ್ಮ-ವೈಚಾರಿಕ ಹಾಗೂ ಸಂಶೋಧಕ ದೃಷ್ಟಿಯನ್ನು ಒಳಗೊಂಡ ಲೇಖನಗಳಿವೆ. ‘ಸಾಹಿತ್ಯ ಶ್ರೀ’ ವಿಭಾಗದಲ್ಲಿ ಸಾಹಿತ್ಯಕ್ಕೆ ವೀರಶೈವ ಸಾಹಿತಿಗಳ ಕೊಡುಗೆ, ವೀರಶೈವ ಸಾಹಿತ್ಯದ ಅವಲೋಕನ ಹಾಗೂ ಕಲಾ ಶ್ರೀ ವಿಭಾಗದಲ್ಲಿ ವೀರಶೈವರು ಲಲಿತ ಕಲೆಗಳಿಗೆ ಸಲ್ಲಿಸಿದ ಸೇವೆಯ ಸಮೀಕ್ಷೆ, ಸಂಗೀತ, ನಾಟಕ ಹಾಗೂ ಗಮಕ ಕಲೆಗಳಿಗೆ ವೀರಶೈವರ ಕೊಡುಗೆ ಇತ್ಯಾದಿ ವಿಷಯಗಳ ಸುದೀರ್ಘ ಲೇಖನಗಳಿವೆ. ಸಾಂದರ್ಭಿಕವಾಗಿ ಸೇರ್ಪಡೆಯಾಗಿರುವ ವರ್ಣಚಿತ್ರಗಳು ಹಾಗೂ ಛಾಯಾಚಿತ್ರಗಳು ಕೃತಿಯ ಮಹತ್ವ ಹೆಚ್ಚಿಸಿವೆ. ಭಕ್ತರು ಹಾಗೂ ಅಭಿಮಾನಿಗಳ ಅಭಿಪ್ರಾಯಕ್ಕೂ ಇಲ್ಲಿ ಅವಕಾಶ ನೀಡಿದ್ದು, ಅದನ್ನು ಕ್ಷೇತ್ರಶ್ರೀ ವಿಭಾಗದಲ್ಲೇ ಪ್ರತ್ಯೇಕ ವಿಭಾಗ ಮಾಡಿ, ದಾಖಲಿಸಲಾಗಿದೆ.
©2024 Book Brahma Private Limited.