‘ಕನ್ನಡ ಮಹಾಭಾರತ ಆದಿಪರ್ವ- 2’ ಕೃತಿಯು ಎಸ್. ಶೇಷಾಚಲ ಶರ್ಮ ಅವರ ಅನುವಾದಿತ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ರಾಮಾಯಣ, ಮಹಾಭಾರತಗಳು ಭರತಖಂಡದ ರಾಷ್ಟ್ರೀಯ ಮಹಾಕಾವ್ಯಗಳು; ಸಮಷ್ಟಿ ಮನಸ್ಸು ಸವೆದ ವಿಕಾಸಶೀಲ ಕೃತಿ ಮೇರುಗಳು. ಮಹಾಭಾರತ ರಾಮಾಯಣಕ್ಕಿಂತ ಭೂಮವಾದ, ಸಂಕೀರ್ಣವಾದ ಮತ್ತು ವೈವಿಧ್ಯಪೂರ್ಣವಾದ ಮಹಾಕಾವ್ಯ, ಇಡೀ ವಿಶ್ವ ಸಾಹಿತ್ಯದಲ್ಲಿ ಅದು ಅಪ್ರತಿಮವಾದ ಕೃತಿ; ಜೀವನ ಸಮಸ್ತ ಕೊಡ್ಡಿದ ಮಹಾಪ್ರತಿಮೆ, ವ್ಯಾಸ ಎಂಬ ಕರ್ತೃ (ಸಂಪಾದಕ ?) ನಾಮವೆ ಸೂಚಿಸುವಂತೆ, ಅದರ ಜೀವನದರ್ಶನದ ಹಾಸುಬೀಸುಗಳು ವಿಸ್ತಾರವಾದವು. ಮಹಾಭಾರತ ಒಳಗುಮಾಡಿಕೊಂಡಿರುವ ಶ್ರೀಮಂತ ಜೀವನಾನುಭವ ಮತ್ತು ಸಂದೇಶಗಳು ಇಂದಿಗೂ ಪ್ರಸ್ತುತ ಮತ್ತು ಎಂದಿಗೂ ಪ್ರಸ್ತುತ್ಯ. ಮಹಾಭಾರತದ ಕನ್ನಡ ಅವತಾರಗಳು ಹಲವು ಆದಿಕವಿ ಪಂಪನಿಂದ “ಇಲ್ಲಿಯವರೆಗೆ, ಅವುಗಳಲ್ಲಿ ಅಪಾರ ವೈವಿಧ್ಯವಿದೆ ; ಕೆಲವು ಭವಾಂತರಗಳಾದರೆ, 'ಇನ್ನೆ ಸ್ಟೋ ಭಾಷಾಂತರಗಳು, ಪಂಪ. ಕುಮಾರವ್ಯಾಸರ ಭಾರತಗಳು ಮೊದಲನೆಯ ವರ್ಗಕ್ಕೆ ನಿದರ್ಶನಗಳಾದರೆ, ಕಳೆದ ಶತಮಾನದಲ್ಲಿ ಮತ್ತು ಈ ಶತಮಾನದಲ್ಲಿ ಹುಟ್ಟಿಕೊಂಡ ಎಷ್ಟೋ ಕೃತಿಗಳು ಎರಡನೆಯ ವರ್ಗಕ್ಕೆ ಉದಾಹರಣೆಗಳು, ಕನ್ನಡ ಅಧ್ಯಯನ ಸಂಸ್ಥೆಯ ಪ್ರಕೃತ ಮಹಾಭಾರತವೂ ಭಾಷಾಂತರವೇ; ಆದರೆ ವಿಶಿಷ್ಟವಾದದ್ದ ಎನ್ನುವ ವಿಚಾರಗಳನ್ನು ಒಳಗೊಂಡಿದೆ.
©2024 Book Brahma Private Limited.