ಸಮಗ್ರ ದಾಸ ಸಾಹಿತ್ಯ ಸಂಪುಟ-35-2

Author : ನಾ. ಗೀತಾಚಾರ್ಯ

Pages 418

₹ 60.00




Year of Publication: 2003
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

‘ಸಮಗ್ರ ದಾಸ ಸಾಹಿತ್ಯ ಸಂಪುಟ-35-2’ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ದಾಸ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾದ ಕೃತಿ. ಆಸೂರಿ ರಾಮಸ್ವಾಮಿದಾಸರು ಮತ್ತು ಇತರ ಶ್ರೀವೈಷ್ಣವ ಹರಿದಾಸರ ಕೀರ್ತನೆಗಳನ್ನು ಒಳಗೊಂಡಿರುವ ಈ ಕೃತಿಯನ್ನು ನಾ. ಗೀತಾಚಾರ್ಯ ಅವರು ಸಂಪಾದಿಸಿದ್ದಾರೆ. ಇಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳು ಕ್ರಮಸೂಚಿ, ಕೀರ್ತನೆಗಳು- ಆಸೂರಿ ರಾಮಸ್ವಾಮಿ ದಾಸರ ಕೀರ್ತನೆಗಳು, ಕೋಸಲ ಪುರೀಶರ ಕೃತಿಗಳು, ಬಡಣ್ಣಯ್ಯಾಚಾರ್ಯರ ಕೃತಿಗಳು, ಪರಿಶಿಷ್ಟ ದಾಸರನ್ನು ಕುರಿತ ಹಾಡುಗಳು ಸಂಕಲನಗೊಂಡಿದ್ದು, ಅನುಬಂಧದಲ್ಲಿ ಕಠಿಣಶಬ್ದಗಳ ಅರ್ಥ, ಟಿಪ್ಪಣಿಗಳು, ಪುರಾಣ ಪ್ರತಿಮೆಗಳು, ಅಂಕಿತಪದಸೂಚಿ, ವಿಶಿಷ್ಟ ಪದಸೂಚಿ, ಸಂಖ್ಯಾಪದಸೂಚಿ ಹಾಗೂ ಕೀರ್ತನೆಗಳ ಅಕಾರಾದಿ ಸಂಕಲನಗೊಂಡಿವೆ.

About the Author

ನಾ. ಗೀತಾಚಾರ್ಯ
(02 February 1958)

ಕನ್ನಡ ಶಾಸನ, ಭಾಷೆ, ದಾಸ ಸಾಹಿತ್ಯ, ಶಾಸ್ತ್ರೀಯ ಸಾಹಿತ್ಯದಲ್ಲಿ ಅಪಾರವಾಗಿ ದುಡಿದವರು ನಾ. ಗೀತಾಚಾರ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಹೆಜ್ಜಾಜಿಯಲ್ಲಿ 1958 ಫೆಬ್ರವರಿ 02 ರಂದು ಜನಿಸಿದರು. ತಂದೆ ನಾರಾಯಣಸ್ವಾಮಿ, ತಾಯಿ ಲಕ್ಷ್ಮೀದೇವಮ್ಮ. ಶೇಷಾದ್ರಿಪುರಂನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ನಾಟಕ,ಕಲೆ, ಸಂಸ್ಕೃತಿ, ಸಾಹಿತ್ಯ ಹೀಗೆ ಹಲವು ರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. `ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟಾದ್ವತ’ ಅವರ ಪ್ರಮುಖ ಕೃತಿ. ‘ಆಳ್ವಾರರ ಹಾಡುಗಳು’ ಅವರ ಅನುವಾದಿತ ಕೃತಿ. ...

READ MORE

Related Books