ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ.
ಕೈಗಾರಿಕಾ ಉದ್ಯಮಗಳಲ್ಲಿ ಇತ್ತೀಚೆಗೆ ನಡೆದ ಕಾರ್ಮಿಕ ಮುಷ್ಕರ, ಭಾರತದ ಭೂಗರ್ಭ ಸರ್ವೇಕ್ಷಣ ಇಲಾಖೆಯ ಬಳಕೆ ವಿಭಾಗದ ಚಟುವಟಿಕೆಗಳ ಕಾರ್ಯಕ್ರಮ, ಭಾರತಕ್ಕೆ ಮರಳಿದ “ಬೆವಿನ್ ಬಾಲಕರು ಮತ್ತು ಅದರ ಉದ್ಯೋಗ, ಕಾರ್ಮಿಕರ ಕೂಲಿಯಲ್ಲಿ ಇಳಿತ, ನಾಗರಿಕ ನೇತೃತ್ವ ಘಟಕಗಳಲ್ಲಿ ಪರಿಶಿಷ್ಟ ಜಾತಿಗೆ ಪ್ರಾತಿನಿಧ್ಯ, ಕಾರ್ಮಿಕರ ಕೂಲಿ ಹಾಗೂ ನೇಮಕಾತಿಯ ಬಗೆಗೆ ಸರ್ಕಾರದಿಂದ ಗುತ್ತಿಗೆದಾರರಿಗೆ ವಿಧಿಸಲಾದ ಕರಾರುಗಳು, ಇಂಗ್ಲೆಂಡಿನಲ್ಲಿಯ ತರಬೇತಿಗೆ ಆಯ್ಕೆಯಾದ ಬೆವಿನ್ ಬಾಲಕರು, ಬೆವಿನ್ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ವರ್ಗದ ಬಾಲಕರ ಆಯ್ಕೆ, ಕೇಂದ್ರ ಕಾಮಗಾರಿ ಇಲಾಖೆಯ ಮನ್ನಣೆ ಪಡೆದ ಗುತ್ತೇದಾರರು, ಫೆಡರಲ್ ರೈಲ್ವೆ ಕಾರ್ಮಿಕರ ಪರವಾಗಿ ಅಥವಾ ಮಜೂರಿ ಕಾಯ್ದೆಯಡಿ ಸಲ್ಲಿಸಲಾಗುವ ಅರ್ಜಿಗಳು, ಕೋರ್ಟಿನ ಆದೇಶಗಳ ಶುಲ್ಕ-ದೆಹಲಿ ಪ್ರಾಂತದಲ್ಲಿ ಕಾರ್ಮಿಕರ ವೇತನ ನಿಯಮಗಳು’ ಮುಂತಾದ ವಿಷಯಗಳ ಕುರಿತ ಬಾಬಾ ಅಂಬೇಡ್ಕರ್ ಅವರು ಚರ್ಚಿಸಿದ, ಮಂಡಿಸಿದ ಭಾಷಣ ಹಾಗೂ ಬರೆಹಗಳಿವೆ. ಅಂಬೇಡ್ಕರ್ ಅವರ ಬರವಣಿಗೆ ಮತ್ತು ಭಾಷಣಗಳಲ್ಲಿ ಅಭಿವ್ಯಕ್ತಗೊಂಡಿರುವ ವಿಚಾರಗಳು ಭಾರತದ ಸಾಮಾಜಿಕ ವಿಚಾರದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಮಹತ್ವದ್ದು.
©2024 Book Brahma Private Limited.