ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-8

Author : ವಿಷ್ಣು ನಾಯ್ಕ

Pages 394

₹ 180.00




Year of Publication: 1999
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-8’ ಗೌರೀಶ ಕಾಯ್ಕಿಣಿ ಅವರ ಸಮಗ್ರ ಪತ್ರಿಕಾ ಲೇಖನಗಳ ಸಂಕಲನ. ಈ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಭಾರತೀಯ ಸಂಸ್ಕೃತಿಯು ಆಧ್ಯಾತ್ಮಿಕವೇ, ನಮ್ಮ ರಾಷ್ಟ್ರಗೀತ, ಆರು ಹಿತವರು ನಿನಗೆ ಈ ಮೂವರೊಳಗೆ, ಶಿವರಾಮ ಕಾರಂತರ ಯಕ್ಷಗಾನ ಬಯಲಾಟ, ಪ್ರಾದೇಶಿಕ ಭಾಷೆಯ ಬಳಕೆಯಲ್ಲಿ ಕೇರಳದ ಮಾದರೀ ಹೆಜ್ಜೆ, ಸಾಹಿತ್ಯದಲ್ಲಿ ಪ್ರಸಾದಗುಣ, ಭಾವೈಕ್ಯ ಮತ್ತು ಕನ್ನಡದ ಸಮನ್ವಯ, ಮಧ್ಯಮ ವರ್ಗಗಳು ಎಲ್ಲಿಗೆ, ಗಾಂಧೀಸ್ಮರಣೆ ಪ್ರಾಮಾಣಿಕವೇ, ರಸರಾಜ ಶೃಂಗಾರವೇ ಅಲ್ಲ, ಹಾಸ್ಯವೇ, ಅಪಕ್ಷ ಪ್ರಜಾಪ್ರತಿನಿಧಿಗಳ ಸಟ್ಟಾಬಾಜಾರು, ಅರ್ಥ ಶಾಸ್ತ್ರಜ್ಞನ ಶಾಸ್ತ್ರಾರ್ಥ, ಪ್ರಜೆ ಮತ್ತು ಪ್ರಭು, ದಕ್ಷ ಆಡಳಿತ ಸ್ವಯಂಸಿದ್ಧವಲ್ಲ, ಪ್ರಜೆ, ಪಕ್ಷ ಮತ್ತು ಪ್ರಭುತ್ವ, ಪಕ್ಷ ರಾಜಕಾರಣದ ವ್ಯಾಕರಣ, ರಾಜಕಾರಣದಲ್ಲಿ ಆತ್ಮಸಾಕ್ಷಿಯ ಇತಿಮಿತಿ, ಹಿಂದೂವಿಶ್ವ ಮತ್ತು ವಿಶ್ವ ಹಿಂದೂ ಪರಿಷತ್ತು, ಗಾಂಧೀ ಎಂಬ ಸತ್ಯ, ಪಕ್ಷಾಂತರದ ಪಕ್ಷವಾತಕ್ಕೆ ಯಾವ ಮದ್ದು, ಶಿಕ್ಷಣದ ಆಡಳಿತದಲ್ಲಿ ವಿದ್ಯಾರ್ಥಿಗಳ ಪಾತ್ರ, ಸಮಾಜವಾದಿಗಳ ಧೋರಣೆದಲ್ಲಿ ನಿಖರತೆ ಏಕೆ ಇಲ್ಲ, ರಾಜ್ಯಗಳ ಸ್ವಾಯತ್ತತೆಯ ಸವಾಲು, ನಾವೇಕೆ ಹಿಂದುಳಿದವರು, ಚುನಾವಣಾ ವೆಚ್ಚದ ಅಭಿವೃದ್ಧಿ ಯೋಜನೆ, ಕಪ್ಪು ಸಮುದ್ರಕ್ಕೆ ಬೇಲಿ, ಭಾರತದ ಜಾಗತಿಕ ಪರ್ವ, ನಗರ-ನರಕ ಲೋಕ, ಪಾಪಿಗಳ ಪುಣ್ಯ ಪವಾಡ, ಒಲಂಪಿಕ್ ಜ್ಯೋತಿಗೆ ಕವಿದ ಕಾವಳ, ಪತ್ರಿಕಾ ವ್ಯವಸಾಯವನ್ನು ಬಾಧಿಸುವ ಪಂಚಭೂತಗಳು, ದಲಿತ ವರ್ಗದ ವಿಮೋಚನೆ, ವಂದೇ ಮಾತರಂ ಮತ್ತು ವಿವೇಕ, ಅಸ್ಪೃಶ್ಯತೆ ಮತ್ತು ಅದರ ನಿವಾರಣೆ, ಗೋಕರ್ಣ, ಯುವಶಕ್ತಿಯ ಸಮಸ್ಯೆ, ಪವಾಡಗಳು ಮತ್ತು ವಿವೇಕ, ಸೇವಾ ನಿವೃತ್ತರ ಸಂಧ್ಯಾರಾಗ, ಜನತೆ ಮತ್ತು ಸೇನೆ, ನಮ್ಮ ನಾಟ್ಯದ ಈ ಅವಿಚ್ಛಿನ್ನ ಪರಂಪರೆ, ಹಿಂದು ಸಮಾಜಗಳಲ್ಲಿ ಬುದ್ಧಿಜೀವಿಗಳ ಪಾತ್ರ, ಕುಮಾರವ್ಯಾಸ ಮತ್ತು ಭಗವದ್ಗೀತೆ, ಸಂಸ್ಕೃತದ ಸಂಕಟ, ಜಾತೀಯ ಸತ್ಯ ಮತ್ತು ಮಾನವೀಯ ನ್ಯಾಯ, ಆತ್ಮಹತ್ಯೆ-ಅಪರಾಧವೋ ಅಪಸ್ಮಾರವೋ, ಮರಾಠಿಗೆ ಸೇರಿದ ಕೆಲವು ಕನ್ನಡ ಶಬ್ದಗಳು, ಮತಾಂತರ ಮತ್ತು ಹಿಂದುತ್ವ, ನಮ್ಮ ಸಿವ್ಹಿಲ್ ಸರ್ವಿಸ್ ಮತ್ತು ರಾಜಕೀಯ ರಾವು ಸ್ಪರ್ಶ, ಮೆಕ್ ಮೋಹನ್ ರೇಖೆಯ ಹಿಂದೆ, ಪರಿಶಿಷ್ಟ ವರ್ಗಗಳು ಮತ್ತು ಗ್ರಾಮೀಣ ಔದ್ಯೋಗೀಕರಣ, ಕೊಂಕಣಿಯ ಮೇಲೆ ಕನ್ನಡದ ಪ್ರಭಾವ, ರಬ್ಬರ್ ಸ್ಟಾಂಪೋ ರಾಷ್ಟ್ರದ ಸೀಲೋ, ಮ್ಯಾಗೆಝಿನ್ ಕತೆಗಳ ಕೈಫಿಯತ್ತು, ಪೋಲೀಸರು ಮತ್ತು ಸಾರ್ವಜನಿಕರು, ಕೇಳನೋ ಹರಿ ತಾಳನೋ, ಪ್ರಾಚೀನ ಭಾರತದಲ್ಲಿ ವಿಮಾನ ವಿದ್ಯೆ ಇತ್ತೇ, ಕೊಂಕಣಿ ಕೆಲವು ಪ್ರಮೇಯಗಳು, ಭಗವದ್ಗೀತೆ ಕೆಂಪು ನೀಲಿ ಕಪ್ಪು, ದ್ರೌಪದಿ ವಸ್ತ್ರಾಪಹರಣ ನಿಜವಾಗಿ ನಡೆದದ್ದೇನು, ಶ್ರೀರಾಮ ಜನ್ಮಭೂಮಿ ಪರೀಕ್ಷಣಂ, ಗಜಗೌರೀ ವೃತಕ್ಕೆ ಐರಾವತ ಬೇಕೇ, ಹಾಡುಗಬ್ಬ ಮತ್ತು ಸಂಗೀತ, ಆರ್ಕೆಸ್ಟ್ರಾ ಮತ್ತು ತಂಬೂರಿ, ಕಲೌತತ್ ಹರಿಕೀರ್ತನಂ, ಒಂದು ಯಕ್ಷ ಪ್ರಶ್ನೆ, ಯಕ್ಷಗಾನವು ಜಾನಪದ ಕಲೆಯೇ, ಯಕ್ಷಗಾನ ಮತ್ತು ಮರಾಠಿ ರಂಗಭೂಮಿ, ಸ್ವರ-ಲಯ-ಭಾವ-ಗತಿ ಮತ್ತು ಡಾ. ಕಾರಂತರು, ಗೋಮಾಂತಕದ ಲೋಕನಾಟ್ಯ- ದಶಾವತಾರಿ ನಾಟಕ, ಸರ್. ನಾರಾಯಣ ಚಂದಾವರಕರ ಮತ್ತು ಬಯಲಾಟದ ಗೀಳು, ರಾಮ ಗಣೇಶ ಗಡಕರಿ, ಏಕಚ್ ಪ್ಯಾಲಾ ಬಗೆಗೆ ಬೇಂದ್ರೆ ಚಾಚ, ನಟ ಸಾಮ್ರಾಟ ಬಾಲಗಂಧರ್ವ, ಯಕ್ಷಗಾನ ಬಯಲಾಟದ ಮೂಲ ಗೊಂಬೆಯಾಟ, ಯಕ್ಷಗಾನ ರಂಗ ಮತ್ತು ಸಮಕಾಲೀನ ನಾಟಕ ಎಂಬ ಲೇಖನಗಳು ಸಂಕಲನಗೊಂಡಿವೆ.

About the Author

ವಿಷ್ಣು ನಾಯ್ಕ
(01 July 1944)

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...

READ MORE

Related Books