ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ ಇತರರು ಅನುವಾದಿಸಿದ್ದಾರೆ.
‘ಸಂವಿಧಾನದ ಕರಡಿನ ಮೊದಲನೆಯ ವಾರ್ಚೆ., ಸಂವಿಧಾನ ಸಭೆಯ ಕಲಾಪಗಳ ಸಮಿತಿಯ ವರದಿ, ಮೂಲಭೂತ ಹಕ್ಕುಗಳನ್ನು ಕುರಿತು ಮಧ್ಯಂತರ ವರದಿ, ಗೆಜೆಟ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವಂತೆ ಕರಡು ಸಂವಿಧಾನ, ಭಾರತ ಸಂವಿಧಾನ ಕಲಮುವಾರು ಚರ್ಚೆ’ ಮುಂತಾದ ಹಲವು ಮಹತ್ವದ ಸಂಗತಿಗಳ ಕುರಿತು ಅಂಬೇಡ್ಕರ್ ಅವರು ತೆಗೆದುಕೊಂಡ ನಿರ್ಣಯ, ಮಂಡಿಸಿದ ಭಾಷಣ, ಬರೆಹಗಳನ್ನು ಈ ಸಂಪುಟದಲ್ಲಿ ಕಾಣಬಹುದು.
ಅಂಬೇಡ್ಕರ್ ಅವರ ಬರವಣಿಗೆ ಮತ್ತು ಭಾಷಣಗಳಲ್ಲಿ ಅಭಿವ್ಯಕ್ತಗೊಂಡಿರುವ ವಿಚಾರಗಳು ಭಾರತದ ಸಾಮಾಜಿಕ ವಿಚಾರದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಮಹತ್ವದ್ದು.
©2024 Book Brahma Private Limited.