ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 4

Author : ವಿಷ್ಣು ನಾಯ್ಕ

Pages 406

₹ 125.00




Year of Publication: 1995
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 4’ ಸಾಹಿತ್ಯ ಸಮೀಕ್ಷೆ. ಈ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಲೇಖಕ ಗೌರೀಶ ಕಾಯ್ಕಿಣಿ ಅವರ ಅರಿಕೆಯಿದೆ. ಕೃತಿಯ ಕುರಿತು ಬರೆಯುತ್ತಾ ನನ್ನ ಬರಹಗಳನ್ನೆಲ್ಲ ಹತ್ತು ಸಂಪುಟಗಳಲ್ಲಿ ಪ್ರಕಟಿಸುವುದಾಗಿ ನನ್ನ ಆತ್ಮೀಯ ಕವಿಮಿತ್ರ ವಿಷ್ಣು ನಾಯ್ಕರು ಮುಂದಾದ ಹೊಸತರಲ್ಲಿ ಅಂಥ ಭಾರದ ಒನಕೆಯನ್ನು ನಿಮ್ಮ ತಲೆಗೆ ಕಟ್ಟಿಕೊಳ್ಳಬೇಡಿ ಎಂದು ನಾನವರಿಗೆ ತಿಳಿಸಿದ್ದೆ. ನನ್ನಿಂದಾಗಿ ಬೆಳೆಯುತ್ತಿರುವ ಬೆಳಯಲೇಬೇಕಾಗಿರುವ ಈ ಉತ್ಸಾಹಿ ತರುಣ ಆರ್ಥಿಕ ನಷ್ಟಕ್ಕೆ ಒಳಗಾಗಿ-ಕೊನೆಗಾಲದಲ್ಲಿ ಅದೊಂದು ಚಿಂತೆಯೊಂದಿಗೆ ನಾನು ಈ ಪ್ರಪಂಚಕ್ಕೆ ವಿದಾಯಹೇಳುವಂತಾಗಬಾರದೆಂಬುದೇ ನನ್ನ ಕಳಕಳಿಯ ಕಾಳಜಿಯಾಗಿತ್ತು. ಆದರೆ ಈ ದಿಟ್ಟ-ಧೀರ ಸಾಹಸಿ ಹಾಗೆಲ್ಲಾ ಬಡಪಟ್ಟಿಗೆ ಹೇಳಿದ ಮಾತನ್ನು ಕೇಳುವವರಲ್ಲ. ಅತುಲ ಆತ್ಮಬಲ ಅವರಿಗೆ. ಮಾಡಿಯೇ ತೀರುತ್ತೇನೆ ಎಂದು ಮುನ್ನಡೆದರು. ಮೂರು ಸಂಪುಟಗಳನ್ನು ಒಂದರ ಬೆನ್ನಿಗೆ ಒಂದರಂತೆ ತಂದೇ ಬಿಟ್ಟರು. ಅವರ ವೈರಿಗಳೂ(ಒಳಗೊಳಗೆ) ಮೆಚ್ಚಿ ಕೊಳ್ಳುವಹಾಗೇ. ಆದರೆ ಇದರಿಂದ ವಿಷ್ಣು ನಾಯ್ಕರು ಬಹಳಷ್ಟು ಸಾಲವನ್ನು ಹೊತ್ತುಕೊಂಡಿರುವುದೂ ನನಗೆ ಗೊತ್ತಿದೆ. ಈ ನಾಲ್ಕನೆಯ ಸಂಪುಟವೂ ಸೇರಿದಂತೆ ಇದುವರೆಗಿನ ಈ ಕೆಲಸಕ್ಕೆ ಅವರು ಸುಮಾರು ಎರಡು ಲಕ್ಷ ರೂಪಾಯಿಗಳನ್ನು ತೊಡಗಿಸಿದ್ದಾರೆಂದೂ, ಮರಳಿ ಬಂದದ್ದು ಅತ್ಯಲ್ಪವೆಂದೂ ಕೇಳಿಬಲ್ಲವನಾಗಿದ್ದೇನೆ. ಇದು ನನ್ನನ್ನು ಅತೀವ ಕಳವಳಕ್ಕೆ ಒಳಪಡಿಸಿದೆ. ಕನ್ನಡದ ನವ್ಯ ಸಹೃದಯ ರಸಿಕ ಮಿತ್ರರು ಈ ಸಂದರ್ಭದಲ್ಲಿ ಪ್ರಕಾಶಕ ವಿಷ್ಣುನಾಯ್ಕರ ಬೆಂಬಲಕ್ಕೆ ಬರಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಬಗ್ಗೆ ಇದುವರೆಗೆ ನಮ್ಮ ಘನ ಸರಕಾರವಾಗಲಿ ತುಂಬ ಉದಾರವಾಗಿ ನಡೆದುಕೊಂಡು ಬಂದಿವೆ. ಈ ಸಮಗ್ರ ಸಂಪುಟಗಳ ಬಗ್ಗೆಯೂ ಅವರ ಹೃದಯವಂತಿಕೆ ಅದೇ ತೆರನಾಗಿರುವಂತೆ ಕೋರುವುದಕ್ಕಾಗಿಯೇ ಈ ಪುಟವನ್ನು ಬಳಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಕೃತಿಯಲ್ಲಿ ಮೊದಲ ಮಾತು, ಅರಿಕೆಯ ಜೊತೆಗೆ ಕಂಪಿನ ಕರೆ, ದಿನಕರ ದೇಸಾಯರ ಕಾವ್ಯ, ವಿ.ಜಿ. ಭಟ್ಟರ ಕಾವ್ಯ, ಚೆನ್ನವೀರ ಕಣವಿ ಕಾವ್ಯದೃಷ್ಟಿ, ಹಾಗೂ ಸ್ವಚ್ಛಂದದಿಂದ ನವ್ಯದತ್ತ ಲೇಖನಗಳು ಸಂಕಲನಗೊಂಡಿವೆ.

About the Author

ವಿಷ್ಣು ನಾಯ್ಕ
(01 July 1944)

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...

READ MORE

Related Books