ಲೇಖಕಿ ಜಾನಕಿ ಶ್ರೀನಿವಾಸ್ ಅವರ ಗೋಕೃ ಮಾಸದ ನೆನಪು ಕೃತಿಯು ತಮ್ಮ ತಂದೆಯವರಾದ ಸಾಹಿತಿ ದಿವಂಗತ ಗೋಪಾಲಕೃಷ್ಣ ರಾವ್ ಅವರ ಸಾಹಿತ್ಯ ಸೇವೆಯ ಕುರಿತ, ಕೃತಿಗಳ ಬಗೆಗಿನ ಲೇಖನ ಸಂಕಲನವಾಗಿದೆ. ಸಣ್ಣ ಕತೆಗಳು, ನಾಟಕ, ಕವಿತೆ ಹಾಗೂ ಪ್ರಬಂಧ ಲೇಖನಗಳಲ್ಲಿ ಸಾಕಷ್‌ಉಟ ಸಾಹಿತ್ಯ ಕೃಷಿ ಮಾಡಿದ್ದ ದಿವಂಗತ ಗೋಪಾಲಕೃಷ್ಣ ರಾವ್ ಅವರ ಕೃತಿಗಳ ಸಮಗ್ರ ವಿವರ ಈ ಕೃತಿಯಿಂದ ಲಭ್ಯವಾಗುತ್ತದೆ. ಮಾಸ್ಟರ್ ಹಿರಣ್ಯಯ್ಯ ಅವರು ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಪತ್ರಕರ್ತ ಹಾಗೂ ಅಂಕಣಕಾರರಾದ ಎಚ್. ಎಸ್.ಅಚ್ಯುತ ಸಂಕೇತಿ ಅವರು ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ.
©2025 Book Brahma Private Limited.