‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ: ಒಂದು’ ವಿಚಾರ ಸಾಹಿತ್ಯ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಯಶವಂತ ಚಿತ್ತಾಲರ ಪ್ರಸ್ತಾವನೆ ಇದೆ. ಕೃತಿಯ ಕುರಿತು ಬರೆಯುತ್ತಾ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯದ ಮೊದಲ ಸಂಪುಟವಿದು. ಅಂಕೋಲೆಯ ಶ್ರೀ ರಾಘವೇಂದ್ರ ಪ್ರಕಾಶನದವರು ಈ ಕುರಿತು ರೂಪಿಸಿಕೊಂಡ ಒಂದು ಬೃಹತ್ ಯೋಜನೆ ಸಮಯಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತವಾಗಿದೆಯೆನ್ನುವ ಶುಭ ಸಮಾಚಾರ ಹೊತ್ತು ಹೊರಬಂದಿದೆ. ಇದರಲ್ಲ ಈ ಯೋಜನೆಗೆ ಪ್ರಸ್ತಾವನೆಯಾಗಬಲ್ಲ ನನ್ನ ಕೆಲವು ಮಾತುಗಳು ಇರಬೇಕು ಎಂದು ಯೋಜನೆಯ ಸಂಚಾಲನ-ಶಕ್ತಿಯಾದ ತರುಣ ಮಿತ್ರ ವಿಷ್ಣು ನಾಯ್ಕರ ಬಯಸಿದ್ದಾರೆ. ನಾನು ತುಂಬಾ ಖುಷಿಯಿಂದ, ಹೆಮ್ಮೆಯಿಂದ ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಗೌರೀಶ- ಸಾಹಿತ್ಯದ ಬಹುಮುಖ್ಯ ಸಾಧನೆ ವೈಚಾರಿಕ ಕ್ಷೇತ್ರಕ್ಕೆ ಸೇರಿದ್ದೆನ್ನಬೇಕು. ಗೌರೀಶರು ನಮಗೆ ಮುಖ್ಯರಾಗುವುದು, ಪ್ರಿಯರಾಗುವುದು ಒಬ್ಬ ಶ್ರೇಷ್ಠ ವಿಚಾರವಾದಿಯಾಗಿ, ವಿಶ್ವವನ್ನು, ಬದುಕನ್ನು ವಿಚಾರಗಳ ಮೂಲಕ ಅರಿಯುವ ಸಾಮರ್ಥ್ಯ ಮನುಷ್ಯನ ಬುದ್ದಿಗಿದೆ ಎನ್ನುವುದರಲ್ಲಿ ಎಲ್ಲ ವಿಚಾರವಾದಿಗಳಿಗೆ ದೃಢವಾದ ನಂಬಿಕೆಯಿದೆ ಎಂದಿದ್ದಾರೆ. ಈ ಕೃತಿಯಲ್ಲಿ ವಿಷ್ಣು ನಾಯ್ಕ ಅವರು ಬರೆದಿರುವ ಮೊದಲ ಮಾತು, ಯಶವಂತ ಚಿತ್ತಾಲರ ಪ್ರಸ್ತಾವನೆ ಜೊತೆಗೆ ವಿಚಾರವಾದ, ವಿಚಾರವಾದ ಮತ್ತು ನಿರಾಶಾವಾದ, ವಿಚಾರವಾದ-ಉತ್ತರಾರ್ಧ, ಮಾರ್ಕ್ಸ್ ವಾದ, ನವ ಮಾನವತಾವಾದ ಹಾಗೂ ನಾಸ್ತಿಕನು ಮತ್ತು ದೇವರು ಎಂಬ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.