ಸಮಗ್ರ ದಾಸ ಸಾಹಿತ್ಯ ಸಂಪುಟ- 16

Author : ಟಿ.ಎನ್. ನಾಗರತ್ನ

Pages 439

₹ 60.00




Year of Publication: 2003
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು- 560002

Synopsys

‘ಸಮಗ್ರ ದಾಸ ಸಾಹಿತ್ಯ ಸಂಪುಟ- 16’ ಉರಗಾದ್ರಿವಾಸವಿಠಲದಾಸರು ಮತ್ತು ಇತರರ ಕೀರ್ತನೆಗಳು ಕೃತಿಯನ್ನು ಹೆಚ್.ಎಸ್. ಶ್ರೀನಿವಾಸಮೂರ್ತಿ, ಎ.ಎನ್. ಅನಂತಸ್ವಾಮಿ ರಾವ್ ಹಾಗೂ ಡಾ.ಟಿ.ಎನ್. ನಾಗರತ್ನ ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ ಕೀರ್ತನೆಗಳು- ಉರಗಾದ್ರಿವಿಠಲದಾಸರ ಕೀರ್ತನೆಗಳು- ಪ್ರಸ್ತಾವನೆ-ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು. ರಘುರಾಮವಿಠಲದಾಸರ ಕೀರ್ತನೆಗಳು- ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು. ಶ್ರೀಶ ಕೇಶವದಾಸರ ಕೀರ್ತನೆಗಳು- ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು. ನಿಡಂಬೂರುರಾಮದಾಸರ ಕೀರ್ತನೆಗಳು- ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು. ಬಿ. ವೆಂಕಟರಾವ್ ರವರ ಕೀರ್ತನೆಗಳು- ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು. ಶ್ರೀ ಅಚಲಾನಂದದಾಸರ ಕೀರ್ತನೆಗಳು- ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು ಸೇರಿದಂತೆ ಅನುಬಂಧದಲ್ಲಿ- ಕಠಿಣಶಬ್ದಗಳ ಅರ್ಥ, ಟಿಪ್ಪಣಿಗಳು, ಅಂಕಿತನಾಮಸೂಚಿ ಹಾಗೂ ಕೀರ್ತನೆಗಳ ಆಕಾರಾದಿ ಸೂಚಿ ಸಂಕಲನಗೊಂಡಿವೆ.

About the Author

ಟಿ.ಎನ್. ನಾಗರತ್ನ
(29 May 1945)

ಶ್ರೀಮತಿ ಡಾ. ಟಿ.ಎನ್.ನಾಗರತ್ನ ಇವರು ಹರಿದಾಸ ಸಾಹಿತ್ಯದಲ್ಲಿ ಮಹತ್ವದ ಹೆಸರು. 35 ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರಿನಲ್ಲಿ, ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ಕೀರ್ತನೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ನಾಗರತ್ನರವರು ಹುಟ್ಟಿದ್ದು ಮಧ್ಯಪ್ರದೇಶದ ಸಿಯೋನಿಯಲ್ಲಿ 1945 ಮೇ 29ರಂದು. 1965ರಲ್ಲಿ ಪ್ರಥಮದರ್ಜೆ, ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಪಡೆದ ಬಿ.ಎ. ಪದವಿ. ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ. ಇಲ್ಲೂ ಕೂಡ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಗಳಿಸಿದ ಪದವಿ. 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ...

READ MORE

Related Books