ಸಮಗ್ರ ದಾಸ ಸಾಹಿತ್ಯ ಸಂಪುಟ: 18 ಭಾಗ 4

Author : ರುಕ್ಮಿಣಿ ಗಿರಿಮಾಜಿ

Pages 878

₹ 60.00




Year of Publication: 2003
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

‘ಸಮಗ್ರ ದಾಸ ಸಾಹಿತ್ಯ ಸಂಪುಟ: 18 ಭಾಗ 4’ ನಂಜನಗೂಡು ತಿರುಮಲಾಂಬಾ ಮತ್ತು ಇತರ ಮಹಿಳಾ ಹರಿದಾಸರ ಕೀರ್ತನೆಗಳನ್ನು ಒಳಗೊಂಡಿರುವ ಈ ಕೃತಿಯನ್ನು ಡಾ. ರುಕ್ಮಿಣಿ ಗಿರಿಮಾಜಿ, ಹೆಚ್. ಎಸ್. ಪದ್ಮಾಮೂರ್ತಿ, ಪ್ರೊ. ನಾ. ಗೀತಾಚಾರ್ಯ, ಡಾ. ನೀ.ಕೃ. ರಾಮಶೇಷನ್, ಮೀನಾರಾವ್, ನಳಿನಿ ವೆಂಕಟೇಶ್ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು- 1) ಯದುಗಿರಿಯಮ್ಮನವರು 2) ನಾಡಿಗರ ಶಾಂತಿಬಾಯಿಯವರು 3) ಓರಬಾಯಿಲಕ್ಷ್ಮೀದೇವಮ್ಮನವರು, 4)ಸರಸಾಬಾಯಿಯವರು 5) ನಂಜನಗೂಡು ತಿರುಮಲಾಂಬರವರು 6) ಬಳ್ಳಾರಿ ರಾಧಾಬಾಯಿಯವರು 7) ಕಳಸದ ಸುಂದರಮ್ಮನವರು 8) ಗುಂಡಮ್ಮನವರು 9) ಸರಸ್ವತಿಬಾಯಿಯವರು ಎಂಬ ಲೇಖನಗಳು ಸಂಕಲನಗೊಂಡಿವೆ.

About the Author

ರುಕ್ಮಿಣಿ ಗಿರಿಮಾಜಿ

ಕಥೆ, ವೈಚಾರಿಕ, ಧಾರ್ಮಿಕ, ಪ್ರವಾಸ ಸಾಹಿತ್ಯದ ಮೂಲಕ ಓದುಗರಿಗೆ ರುಕ್ಮಿಣಿ ಗಿರಿಮಾಜಿ ಚಿರಪರಿಚಿತ. ದಾಸ ಸಾಹಿತ್ಯ ಅಧ್ಯಯನ ಹಾಗೂ ವಿಚಾರ ಅಭಿವ್ಯಕ್ತಿಯಲ್ಲಿ ಅವರದ್ದು ವಿಶೇಷ ಕೊಡುಗೆ ಇದೆ. ಅಖಿಲ ಭಾರತದ ಮಾಧ್ವ ಮಹಾಮಂಡಲದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ರುಕ್ಮಿಣಿ ವರದ ಕೃತಿಯ ಮೂಲಕ ಹರಿದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ...

READ MORE

Related Books