ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-10

Author : ವಿಷ್ಣು ನಾಯ್ಕ

Pages 380

₹ 200.00




Year of Publication: 2002
Published by: ಶ್ರೀರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲಾ, ಅಂಕೋಲ- 581314

Synopsys

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ-10’ ಸಂಕೀರ್ಣ ಈ ಕೃತಿಯನ್ನು ಲೇಖಕ ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಪ್ರಕಾಶಕರ ನುಡಿ, ಪ್ರಸ್ತಾವನೆ ಜೊತೆಗೆ ನಾಲ್ಕು ಭಾಗಗಳಲ್ಲಿ ಸಂಕೀರ್ಣ ಬರಹಗಳು ಸಂಕಲನಗೊಂಡಿವೆ. ಮೊದಲ ಭಾಗದಲ್ಲಿ ಮಿಂಚು ಗೊಂಚಲು ಶೀರ್ಷಿಕೆಯಡಿ ಋತುಗಾನ, ಸೀಮೋಲ್ಲಂಘನ, ವ್ಯಕ್ತಿ, ಋಣಾನುಬಂಧ, ದ್ದಂದ್ವ ಸಮಾಸ, ನಾಟಕದ ನಿಯಮ, ದೃಷ್ಟಿ ಬಿಂದುಗಳು, ಕವಲುದಾರಿ, ಧರ್ಮ ಸಂಕಟ, ನೀತಿ, ಚೆಲುವಿನ ಜೇನು, ಧೀರ, ಆತ್ಮಸಾಕ್ಷಿ, ಶ್ರಮದ ಬೆಲೆ, ಕರ್ಮ ಮತ್ತು ಫಲಾಶೆ, ಯಶಸ್ಸು-ಶ್ರೇಯಸ್ಸು, ಧುಮುಕುವ ಮೊದಲು, ಆಸ್ತಿಕನ್ಯಾರು, ಈಜುಗುಂಬಳ, ಮೂಢನಂಬಿಕೆ, ದೇವತೆಗಳ ಗೆಳೆಯ, ಅಕಬರನ ಉಂಗುರ, ಕ್ಷಣಿಕ, ಪ್ರಪಂಚದ ಪರಮಾಶ್ಚರ್ಯ, ಗೆಳೆತನದ ಗುಟ್ಟು, ಸಂವೇದನೆ, ಹುತಾತ್ಮತೆಯ ಹವ್ಯಾಸ, ಜ್ಯೋತಿ ಮತ್ತು ಜ್ವಾಲೆ, ವೀಣೆಯ ತಂತಿಗಳು, ಪೂರ್ಣತ್ವ, ಅನುಭವದಿಂದ ಪಾಠ, ತೆರೆದ ಮನಸ್ಸು, ದೇವರೇ ಕಾಯಬೇಕು ಯಾವಾಗ, ಸಂಭಾವಿತತನದ ತಂತ್ರ, ಮರ್ಯಾದೆ ಮತ್ತು ಅಹಂಕಾರ, ಜನಮರುಳೋ, ಕೃಪೆ, ಕೃತಘ್ನತೆ, ಋಣಭಾರ, ಔದಾರ್ಯದ ಉರುಳು, ಯೇಸು ಸಿಲುಬೆಗೇರಿದ್ದು ಹೇಗೆ, ಯೇಸುವಿನ ಯಾಚನೆ, ಹೆಂಡತಿಯ ಪ್ರೀತಿ, ಹೃದಯವಂತಿಕೆ, ಜಾಗ ತಪ್ಪಿದ ವಸ್ತು, ಮಿಶ್ರಲೋಹದ ನಾಣ್ಯ, ಒಳಿತಿವ ಹಗೆ, ಪಾಪದ ಮೀಮಾಂಸೆ, ಪಾಪದ ಜಾರುಗುಂಡಿ, ಸತ್ಯ-ಅಹಿಂಸೆ, ಸತ್ಯಂವದ, ಸೇವಾಧರ್ಮ, ಪ್ರೌಢ ವಿವಾಹ, ದಾಂಪತ್ಯ ಯೋಗ, ಬ್ರಾಹ್ಮಣೀಕರಣ, ಮಣಿಯ ಮೈಲಿಗೆ, ವರ್ಣ ಮತ್ತು ಜಾತಿ, ನರ ಓರ್ವನೆ ಕೊಂದನಲ್ಲನೇ, ದ್ಯಾಮವ್ವನ ಜಾತ್ರೆ, ಪಕ್ಷಾಂತರ/ಪಕ್ಷದ್ರೋಹ, ನಿಮ್ಮ ಮತ ಯಾರಿಗೆ, ಪಂಚಮದಲ, ಖಡ್ಗ ಮೃಗಾಧ್ವಾನ, ಮಯ್ಕೊವಸ್ಕಿಯ ಪ್ರತಿಮೆಯ ಬುಡದಲ್ಲಿ, ಶಿಕ್ಷಣಕ್ಕೆ ಮೂಲವ್ಯಾಧಿ, ಗುರುವಿನ ಗುಲಾಮರು, ಸಿದ್ಧಾರ್ಥ ಬುದ್ಧ ಲೇಖನಗಳು ಸಂಕಲನಗೊಂಡಿವೆ. ಹಾಗೇ ಜಿಜ್ಞಾಸೆ ಎಂಬ ಶೀರ್ಷಿಕೆಯಡಿಯಲ್ಲಿ ವಾಲ್ಮೀಕಿ ಯಾರು, ಆದಿಕವಿ ಏಕೆ ಹೇಗೆ, ವಾಲ್ಮೀಕಿಯ ಕರುಣಾಯನ, ವಾಲ್ಮೀಕಿ ತೂಕಡಿಸಿದಾಗ-1, ವಾಲ್ಮೀಕಿ ತೂಕಡಿಸಿದಾಗ-2, ದಶರಥನ ಹೆಂಡಂದಿರು, ಅಹಲ್ಯೋದ್ಧಾರ, ಶೂರ್ಪಣಖೀ ಪ್ರಸಂಗ, ಪಂಪಾತೀರದ ಪುಷ್ಪಗಳು, ಕೃಷ್ಣ ಪ್ರಶ್ನೆ, ಕಾಳಿದಾಸ ಮತ್ತು ಮಹಾಭಾರತ ಸೇರಿದಂತೆ 160 ಲೇಖನಗಳು ಸಂಕಲನಗೊಂಡಿವೆ.

About the Author

ವಿಷ್ಣು ನಾಯ್ಕ
(01 July 1944)

ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...

READ MORE

Related Books