ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಶ್ರೀ ಪಂಚಗವಿ ಮಠದ (ಗೌರಿಶಂಕರ ನಗರ) ಶ್ರೀ ಗೌರಿ ಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯವನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು. ಪ್ರೊ. ಮಲೆಯೂರು ಗುರುಸ್ವಾಮಿ -ಪ್ರಧಾನ ಸಂಪಾದಕರು, ನಂದೀಶ ಹಂಚೆ -ಸಂಪಾದಕರು. ಮೈಸೂರು ರಾಜಮನೆತನದ ಅರಸು ಒಬ್ಬರಿಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿತು. ಚಾಮುಂಡಿ ತಪ್ಪಿಲಿನಲ್ಲಿದ್ದ ಗವಿಯೊಂದರಲ್ಲಿ ಯೋಗಾನುಷ್ಠಾನದಲ್ಲಿದ್ದ ಶಿವಬಸವ ಸ್ವಾಮಿಗಳು ಆ ಕಾಯಿಲೆಯನ್ನು ಗುಣಪಡಿಸಿದ್ದರಿಂದ, ಸ್ವಾಮಿಗಳಿದ್ದ ಗವಿಯ ಸುತ್ತಲಿನ ಐದೂ ಗವಿಗಳನ್ನು ಅಭಿವೃದ್ಧಿಪಡಿಸಿದರು. ಅಂದಿನಿಂದ ಅರಮನೆ ಶ್ರೀ ಪಂಚಗವಿ ಮಠ ಎಂದೇ ಈ ಸ್ಥಳ ಪ್ರಸಿದ್ಧಿಗೆ ಬಂದಿತು. ಮಠದ ಪರಂಪರೆಯಾಗಿ ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಗೌರಿಶಂಕರ ಸ್ವಾಮಿಗಳ (ಮೊದಲಿನ ಹೆಸರು ಶಂಕರ) ಪಟ್ನೇಟಾಧಿಕಾರದ ನಂತರ ಮಠವು ಕಂಡ ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಸೇವೆಗಳ ಸಮಗ್ರ ಚಿತ್ರಣವನ್ನು ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಶಿವರಾತ್ರೀಶ್ವರ ನವರತ್ನ ಮಾಲಿಕಾ, ಶಿವರಾತ್ರೀಶ್ವರ ರಾಷ್ಟ್ರಕಂ, ಅಕ್ಕಮಾದೇವಿ. ಬಸವಾನಂದ ಲಹರಿ, ಭಾಷಣಗಳು ಹಾಗೂ ಅನುಬಂಧಗಳು ಹೀಗೆ ಕೃತಿಯ ಒಟ್ಟು ಚೌಕಟ್ಟು ಇಲ್ಲಿ ಕಾಣಸಿಗುತ್ತದೆ.
©2025 Book Brahma Private Limited.