ಲೇಖಕ ಯುಗಟಿ ರಘು ನಾಡಿಗ್ ಅವರ ಭಾವಾನುವಾದ ಕೃತಿ ʻಬ್ಯಾಬಿಲೋನ್‌ನಲೊಬ್ಬ ಕುಬೇರʼ. ಮೂಲ ಕೃತಿ ಅಮೇರಿಕಾದ ಲೇಖಕ ಜಾರ್ಜ್ ಸ್ಯಾಮ್ಯುಯೆಲ್ ಕ್ಲಾಸನ್ ಅವರ ʻದಿ ರಿಚೆಸ್ಟ್ ಮ್ಯಾನ್ ಇನ್ ಬ್ಯಾಬಿಲಾನ್ʼ. 1926ರಲ್ಲಿ ಪ್ರಕಟಗೊಂಡ ಕೃತಿ ಪ್ರಾಚೀನ ಬ್ಯಾಬಿಲೋನ್‌ನಲ್ಲಿ 4,097 ವರ್ಷಗಳ ಹಿಂದೆ ರಚಿಸಲಾದ ಉಪಮೆಗಳ ಸಂಗ್ರಹದ ಮೂಲಕ ಆರ್ಥಿಕ ಸಲಹೆಯನ್ನು ನೀಡುತ್ತದೆ. ಪ್ರಾಚೀನ ಬ್ಯಾಬಿಲೋನ್ ಅತ್ಯಂತ ಸಿರಿವಂತ ನಗರವಾದ ಕುರಿತು, ಅಲ್ಲಿನ ಜನರ ವ್ಯಾವಹಾರಿಕ ಜಾಣ್ಮೆ, ಹಣದ ಗಳಿಕೆ-ಉಳಿತಾಯಕ್ಕೆ ಅವರು ಅಳವಡಿಸಿಕೊಂಡ ಸದೃಢ ಆರ್ಥಿಕ ನಿಯಮಗಳು ಹೀಗೆ ವೈಯಕ್ತಿಕ ಸಂಪತ್ತಿನ ರಹಸ್ಯವನ್ನು ಪುಸ್ತಕ ಬಹಿರಂಗಪಡಿಸುತ್ತಾ ಆ ಮೂಲಕ ನಮ್ಮ ವೈಯಕ್ತಿಕ ಹಣಕಾಸಿನ ಸಮಸ್ಯೆಗಳ ಬಗ್ಗೆ ತಿಳುವಳಿಕೆಯನ್ನು ಮತ್ತು ಪರಿಹಾರವನ್ನು ನೀಡುತ್ತದೆ.
©2024 Book Brahma Private Limited.