ಕೊಡೇಕಲ್ಲ ಬಸವಣ್ಣ, ರಾಚಪ್ಪಯ್ಯ ಮತ್ತಿತರರ ತತ್ವಪದಗಳು

Author : ಶಿವಾನಂದ ಎಸ್. ವಿರಕ್ತಮಠ

Pages 636

₹ 110.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: ಎರಡನೆಯ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2
Phone: 08022773147

Synopsys

ಕೊಡೇಕಲ್ಲ ಬಸವಣ್ಣ ,ರಾಚಪ್ಪಯ್ಯ ಮತ್ತಿತರರ ತತ್ವಪದಗಳು-ಈ ಕೃತಿಯನ್ನು ಲೇಖಕ ಶಿವಾನಂದ ಎಸ್. ವಿರಕ್ತಮಠ ಸಂಪಾದಿಸಿದ್ದಾರೆ. ಕಾಲಜ್ಞಾನವನ್ನು ಹೇಳುವವರೆಂದೇ ಖ್ಯಾತಿಯ ಕೊಡೇಕಲ್ಲ ಬಸವಣ್ಣ ಮೂಲತಃ ಹಂಪಿಯವರು. ಮಲ್ಲಿಶೆಟ್ಟಿ -ಲಿಂಗಾಜೆಮ್ಮ ಕಂಪತಿ ಮಗ. ಇವರ ಕಾಲ ಸರಿಸುಮಾರು ಕ್ರಿ.ಶ. 1489. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೇಕಲ್ಲು ಗ್ರಾಮದಲ್ಲಿ ನೆಲೆ ನಿಂತ ಸಂತ-ಶರಣ. ಈ ಗ್ರಾಮವು ಕೃಷ್ಣಾ ನದಿಯ ತಟದಲ್ಲಿದೆ. ತುರುಗಾಃಇ ರಾಮಣ್ಣನ ವಚನ ಆಧಾರದನ್ಧವಯ ಕಲ್ರಿಯಾಣ ಬಿಟ್ಸಿಟು ಸಂಗಮಕ್ಕೆ ಬರುವಾಗ ಕೊಡೇಕಲ್ಲು ಗ್ರಾಮದಲ್ಲಿ ಕೊಡೇಕಲ್ಲು ಬಸವಣ್ಣ ತಂಗಿದ್ದ ಎಂದು ತಿಳಿದು ಬರುತ್ತದೆ.

ಅದ್ವೈತ ಸಂಗಮೇಶ್ವರ ಎಂಬಾತ ಕೊಡೇಕಲ್ಲು ಬಸವಣ್ಣನ್ನು ಅಧ್ಯಾತ್ಮಿಕವಾಗಿ ಸೆಳೆದಿದ್ದ ಎಂದು ಹೇಳಲಾಗುತ್ತಿದೆ. ಇಷ್ಟಲಿಂಗ ಬಿಡಿಸಿ ಚರ್ಮಾಂಬರ ಉಡಿಸಿ ಕೈಯಲ್ಲಿ ಕೋಲು ,ಕಾಲಲ್ಲಿ ಕಂಸ, ‘ಹಂಡಿ’ ಎಂಬ ಮಣ್ಣಿನ  ಭಿಕ್ಷಾ ಪಾತ್ರೆ ನೀಡಿ ಅದ್ವೈತದ ನುಡಿ ಸಾರಲು ಹೇಳಿದ ಎಂಬ ಐತಿಹ್ಯವೂ ಇದೆ. ಮೊದಲ ಪತ್ನಿ ಕಾಶಮ್ಮ ತೀರಿಕೊಂಡಾಗ ಬಳ್ಳಿಗಾವೆಯ ಪಂಪವೆಣ್ಣಿಗೆ ಮಠದ ಸಿದ್ಧಯ್ಯ -ಚೆನ್ನಮ್ಮರ ಮಗಳು ನೀಲಮ್ಮ ( ಮಹಾದೇವಮ್ಮ ) ನನ್ನು ಮದುವೆಯಾಗಿ, ಮಕ್ಕಳು ರಾಚಪ್ಪಯ್ಯ, ಸಂಗಪ್ಪಯ್ಯ ಹಾಗೂ ಗುಹೇಶ್ವರ ಸಹಿತಿ ಕಾಲಜ್‌ಆನ ಸಾರುತ್ತಾ ಬದುಕು ಕಳೆಯುತ್ತಿದ್ದರು. ಕೊಡೇಕಲ್ಲು ಕಡೆಗೆ ಬಂದಾಗ ಅರಸು ಹನುಮನಾಯಕರ ಬೆಂಬಲವಿತ್ತು. ಇವರ ಕಾಲಜ್ಞಾನ ಸಾಹಿತ್ಯವನ್ನು ‘ಅಮರಗನ್ನಡ’ ಎಂಬ ಸಾಂಕೇತಿಕ ಲಿಪಿಯಲ್ಲಿದೆ.  ಕೊಡೇಕಲ್ಲು ಬಸವಣ್ಣ, ರಾಚಪ್ಪಯ್ಯ ಮತ್ತು ಇತರೆ ತತ್ವಪದಕಾರರ ತತ್ವಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. 

About the Author

ಶಿವಾನಂದ ಎಸ್. ವಿರಕ್ತಮಠ
(01 June 1965)

ಶಿವಾನಂದ ಎಸ್. ವಿರಕ್ತಮಠ ಅವರು ಜನಿಸಿದ್ದು 1965 ಜೂನ್‌ 1ರಂದು. ಬಳ್ಳಾರಿ ಜಿಲ್ಲೆ ಹೊಸಪೇಟೆಯವರಾದ ಇವರು ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯಾಸಕ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.    ...

READ MORE

Related Books