ಗೌತಮ ಬುದ್ಧನ ಪೂರ್ವಜನ್ಮದ ಕಥೆಗಳಿಗೆ ಜಾತಕ ಎಂದು ಹಾಗೂ ಬುದ್ಧನ ಶಿಷ್ಯರಾದ ಭಿಕ್ಷು ಹಾಗೂ ಭಿಕ್ಷುಣಿಯರ ಪೂರ್ವಜನ್ಮದ ಕಥೆಗಳಿಗೆ ಅವಧಾನ ಎಂತಲೂ ಕರೆಯುತ್ತಾರೆ. ಬುದ್ಧನ ವಚನ, ಪಾಲಿ ಭಾಷೆಯಲ್ಲಿರುವ ಬೌದ್ಧ ಧರ್ಮ ಸಾಹಿತ್ಯಕ್ಕೆ ಬೌದ್ಧರು ಲಕ್ಷಣ ಕೊಡುವ ಒಂಭತ್ತು ಅಂಗಗಳಲ್ಲಿ ಜಾತಕ ಎಂಬುದು ಏಳನೆಯದು. ಇದನ್ನೇ ತಿಪಿಟಿಕ ಎಂದೂ ಕರೆಯುತ್ತಾರೆ. ಕೆಲವು ಜಾತಕಗಳು ಸ್ವತಃ ಬುದ್ಧನೇ ಹೇಳಿದ್ದು, ಮತ್ತೇ ಕೆಲವು ಆತನ ಶಿಷ್ಯರು ಹೇಳಿದ್ದು ಎನ್ನಲಾಗುತ್ತದೆ. ಈ ಯಾವುದಕ್ಕೂ ಆಧಾರಗಳಿಲ್ಲ. ಆದರೆ, ಇವು ಸಂಕಲನಗೊಂಡಿವೆ. ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗಿವೆ. ಬಕ, ಗಾಂಗೇಯ, ಉಲೂಕ, ಚರ್ಮಶಾಟಕ, ನೃತ್ತ, ದರ್ಭಪುಷ್ಪ, ಕುರಂಗಮೃಗ, ಸುಜಾತ, ಮಾಂಸ, ಕಾತ್ಯಾಯಿನಿ ಹೀಗೆ ಒಟ್ಟು 28 ಜಾತಕಗಳ ಕಥೆಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ಒಟ್ಟು 14 ಚಿತ್ರಗಳಿವೆ. ಆದ್ದರಿಂದ, ಕೃತಿಯ ಪ್ರಮುಖ ಶೀರ್ಷಿಕೆಯೂ ಇದೇ ಆಗಿದೆ. ಇಲ್ಲಿಯ ಕಥೆಗಳು ನೀತಿಬೋಧಕವೂ ಆಗಿವೆ.
©2025 Book Brahma Private Limited.