ಸ್ನೇಹ ಚಿಂತನ (ಎಚ್.ಎಸ್. ಪಾರ್ವತಿಯವರ ಸಾಹಿತ್ಯ ಅಧ್ಯಯನ)

Author : ಗೀತಾ ಶೆಣೈ

Pages 396

₹ 260.00




Year of Publication: 2012
Published by: ಸಮರ್ಥ ಪ್ರಕಾಶನ
Address: ಹೆಚ್‍ಬಿಆರ್ ಬಡಾವಣೆ, ಬೆಂಗಳೂರು - 560043
Phone: 9448437443

Synopsys

ಶ್ರೀಮತಿ ಎಚ್.ಎಸ್. ಪಾರ್ವತಿ ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಸ್ನೇಹ ಚಿಂತನ ಕೃತಿಯ ಮೂಲಕ ಅವರ ಅಗಾಧ ವ್ಯಕ್ತಿತ್ವವನ್ನು ಲೇಖಕಿ ಗೀತಾ ಶೆಣೈ ಅವರು ಮಾಡಿದ್ದೇ ಈ ಕೃತಿ. 

ಸೃಜನಶೀಲ ಮತ್ತು ಭಾಷಾಂತರ ಪ್ರಕಾರಗಳಲ್ಲಿ ಸುಮಾರು ಅರುವತ್ತು ಕೃತಿಗಳನ್ನು ಬೆಳಕಿಗೆ ತಂದಿದ್ದಾರೆ. ಬಾನುಲಿ ನಾಟಕ ಪ್ರಕಾರಕ್ಕೆ ಪಾರ್ವತಿ ಅವರುದ್ದು ದೊಡ್ಡ ಕೊಡುಗೆ.  ಹಿಂದಿ ಸಾಹಿತ್ಯದ ಪ್ರಮುಖ ಲೇಖಕರ ಮತ್ತು ಲೇಖಕಿಯರ ಕತೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾದೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಮೊದಲಾದ ಪ್ರಮುಖ ಸಂಸ್ಥೆಗಳ ಮೂಲಕ ಬೆಳಕಿಗೆ ತಂದಿದ್ದಾರೆ. ಈ ಶ್ರೇಷ್ಟ ಲೇಖಕಿಯ, ಚಿಂತಕಿಯ ಸಮಗ್ರ ಕೃತಿಗಳನ್ನು ಪ್ರಮುಖ ವಿದ್ವಾಂಸರ ಮೂಲಕ ವಿಶ್ಲೇಷಣೆಗೆ ಒಳಪಡಿಸಿ ಸಮಗ್ರ ಅಧ್ಯಯನ ರೂಪದಲ್ಲಿ ಈ ಗ್ರಂಥವನ್ನು ಪ್ರಕಟಿಸಲಾಗಿದೆ.

ಕನ್ನಡದಲ್ಲಿ ಲೇಖಕಿಯೊಬ್ಬರ ಸಮಗ್ರ ಸಾಹಿತ್ಯ ಅಧ್ಯಯನ ಸ್ವತಂತ್ರ ರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ಇದೇ ಮೊದಲು. ಪಾರ್ವತಿಯವರ ಕೃತಿ ವಿಶ್ಲೇಷಣೆಯನ್ನು ಮೂರು ಭಾಗಗಳಲ್ಲಿ, 1. ಸೃಜನಶೀಲ ಸಾಹಿತ್ಯ, 2. ಭಾಷಾಂತರ ಸಾಹಿತ್ಯ ಮತ್ತು ಬಾನುಲಿ ನಾಟಕಗಳು ಎಂಬುದಾಗಿ ವರ್ಗೀಕರಿಸಿ ಇಲ್ಲಿ ನೀಡಲಾಗಿದೆ. ಗ್ರಂಥದ ಕೊನೆಯ ಭಾಗದಲ್ಲಿ ಅವರ ಸಂದರ್ಶನವೂ ಇದೆ. ಇದು ಹಿರಿಯ ತಲೆಮಾರಿನ ಲೇಖಕಿಯ ಸಾಹಿತ್ಯಾವಲೋಕನಕ್ಕೆ ಉತ್ತಮ ಆಕರ ಗ್ರಂಥವಾಗಿದೆ.

 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books