ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ.
ಆಸ್ಪಶ್ಯತೆ - ಅದರ ಮೂಲ ಅಧ್ಯಾಯ, ಅಸ್ಪೃಶ್ಯರು - ಅವರ ಸಂಖ್ಯೆ, ಗುಲಾಮರು ಮತ್ತು ಅಸ್ಪಶ್ಯರು, ಭಾರತದ ಕೊಳೆಗೇರಿ - ಅಸ್ಪಶ್ಯತೆಯ ಕೇಂದ್ರ ಸಮುದಾಯದಿಂದ ಹೊರಗೆ, ಮಾನವ ಒಡನಾಟಕ್ಕೆ ಅಯೋಗ್ಯರು, ಅಸ್ಪಶ್ಯತೆ ಮತ್ತು ಅರಾಜಕತೆ, ಅರಾಜಕತೆ ಹೇಗೆ ಶಾಸನವಿಹಿತ?, ಹಿಂದೂಗಳು ಮತ್ತು ಸಾರ್ವಜನಿಕ ಅಂತಃಸಾಕ್ಷಿಯ ಕೊರತೆ ಅಧ್ಯಾಯ, ಹಿಂದೂಗಳು ಮತ್ತು ಅವರ ಸಾಮಾಜಿಕ ಪ್ರಜ್ಞೆಯ ಕೊರತೆ, ಹಿಂದೂ ಮತ್ತು ಜಾತಿಪದ್ಧತಿಯಲ್ಲಿ ಅವರ ನಂಬಿಕೆ, ಅಸ್ಪಶ್ಯರು ಎದುರಿಸಬೇಕಾಗಿರುವ ಸಂಗತಿಗಳು, ತಾರತಮ್ಯದ ಸಮಸ್ಯೆ ಮುಂತಾದ ಲೇಖನಗಳು ಮತ್ತು ಭಾಷಣಗಳು ಈ ಸಂಪುಟ ಒಳಗೊಂಡಿದೆ.
ಅಂಬೇಡ್ಕರ್ ಅವರ ಬರವಣಿಗೆ ಮತ್ತು ಭಾಷಣಗಳಲ್ಲಿ ಅಭಿವ್ಯಕ್ತಗೊಂಡಿರುವ ವಿಚಾರಗಳು ಭಾರತದ ಸಾಮಾಜಿಕ ವಿಚಾರದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಮಹತ್ವದ್ದು.
©2024 Book Brahma Private Limited.