ನಯಸೇನನ ಸರಳ ಧರ್ಮಾಮೃತ ಸಂಗ್ರಹ ಕೃತಿಯು ಅರ್ಥಾನುಗತ ವಿಂಗಡಣೆ ಸಂಗ್ರಹದ ಪೂರ್ಣಪಾಠವಾಗಿದೆ. ಈ ಕೃತಿಯ ಬಗ್ಗೆ ಲೇಖಕರು ಬರೆಯುತ್ತಾ, ’ನಯಸೇನ, ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಅಪ್ಪಟ ದೇಸಿಕವಿ. ಅವನ ಧರ್ಮಾಮೃತ ಅಪ್ಪಟ ದೇಸಿಕಾವ್ಯ. ನಯಸೇನ ತನ್ನ ಕಾಲದ ಬದುಕಿನ ಸೂಕ್ಷ್ಮ ವಿವರಗಳನ್ನು ದೇಸಿ ಸೊಗಡಿನಲ್ಲಿ ಅರ್ಥಪೂರ್ಣವಾಗಿ ನಿರೂಪಿಸಿದ್ದಾನೆ.
ಜೈನ ಧರ್ಮಿಯನಾಗಿ ಸ್ವಧರ್ಮದಲ್ಲಿ ನಿಷ್ಠೆ, ಪರಧರ್ಮದಲ್ಲಿ ಕುತೂಹಲ ಬೆಳೆಸಿಕೊಂಡು ಸಾಮಾನ್ಯ ಜನರಿಗೂ ತಲುಪುವಂತಹ ರೀತಿಯಲ್ಲಿ ಸುಲಭ ಭಾಷಾ ಶೈಲಿಯಲ್ಲಿ ಧರ್ಮದ ವಿಚಾರಗಳನ್ನು ಹೇಳುವುದು ನಯಸೇನನ ವಿಶೇಷ ಸಾಧನೆ. ಅಚ್ಚಗನ್ನಡವನ್ನು ಪ್ರತಿಪಾದಿಸಿದವರಲ್ಲಿ ನಯಸೇನ ಮೊದಲಿಗ. ಹನ್ನೆರಡನೆಯ ಶತಮಾನದ ಜನಪದ ನಡೆ-ನುಡಿ ಆಡುಮಾತಿನ ಸಾಮಾಜಿಕ ಚಹರೆ ಇವು ”ಧರ್ಮಾಮೃತ’ಕ್ಕೆ ಸಾರ್ವಕಾಲೀನತೆಯನ್ನು ಗಳಿಸಿಕೊಟ್ಟಿವೆ. ಆ ಪಠ್ಯದ ಸಂಗ್ರಹವನ್ನು ಇಲ್ಲಿ ಸಂಪಾದಿಸಲಾಗಿದೆ’ ಎಂದಿದ್ದಾರೆ.
©2024 Book Brahma Private Limited.