ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವು

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 461

₹ 280.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560094
Phone: 080-22107796

Synopsys

ಹೊಸಗನ್ನಡ ಗದ್ಯ ಸಾಹಿತ್ಯದ ಅರುಣೋದಯ ಕಾಲದಲ್ಲಿ ಪ್ರಮುಖ ಕೃತಿಯಾಗಿ ಹೊರಹೊಮ್ಮಿದ ಅನನ್ಯ, ಅನರ್ಘ್ಯ ಕೃತಿ ಕೆಂಪುನಾರಾಯಣನ ರಚಿಸಿದ ಮುದ್ರಾಮಂಜೂಷ. 1893ರಲ್ಲಿ ರಚಿತವಾದರೂ ಐದು ದಶಕಗಳ ತರುವಾಯ ಬಾಸೆಲ್ ಮಿಷನರಿ ಸಂಸ್ಥೆಯಿಂದ ಪ್ರಕಟಣೆಗೊಂಡ ಈ ಕೃತಿ ನಂತರದಲ್ಲೂ ಗದ್ಯದ ಭಾಷೆ ಶೈಲಿಗಳಲ್ಲಿ ಉಂಟಾಗುತ್ತಿದ್ದ ಸ್ಥಿತ್ಯಂತರಗಳ ಕಾರಣಕ್ಕೆ ಹಲವು ಭಾರಿ ತಿದ್ದುಪಡಿಗೆ ಒಳಗಾಗುತ್ತಲೇ ಬಂದಿದೆ. ನಿರಂತರ ತಿ‌ದ್ದುಪಡಿಗೆ ಒಳಗಾದ ಕಾರಣ ಇದು ಕವಿಲಿಖಿತ ಮೂಲ ರೂಪದಿಂದ ದೂರ ಸರಿಯುತ್ತಾ ಸಾಗಿರುವುದು ದುರಂತ. ಆದರೆ ಈ ಕೃತಿಯಲ್ಲಿ ವೆಂಕಟಾಚಲಶಾಸ್ತ್ರಿಯವರು ಲಭ್ಯವಿದ್ದ ಮೂಲ ತಾಳೆಯೋಲೆ ಪ್ರತಿ, ಕಾಗದ ಪ್ರತಿ ಮತ್ತು ಮುದ್ರಿತ ಪರಿಷ್ಕರಣಗಳನ್ನು ಆಧಾರವಾಗಿಟ್ಟುಕೊಂಡು ಮೂಲಕೃತಿಗೆ ಹೆಚ್ಚೇನು ಅರ್ಥ ವ್ಯತ್ಯಾಸ ಕಾಣದ ರೀತಿಯಲ್ಲಿ ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಈ ಕೃತಿಯನ್ನು ರಚಿಸಿದ್ದಾರೆ.

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books