ಮಂಗರಸ ಕವಿ ಪ್ರಣೀತ ಜಯನೃಪಕಾವ್ಯಂ

Author : ಎಸ್.ಜಿ. ನರಸಿಂಹಾಚಾರ್

Pages 259




Year of Publication: 1897
Published by: ಎಸ್.ಜಿ. ನರಸಿಂಹಾಚಾರ್
Address: ಸರ್ಕಾರಿ ಓರಿಯೆಂಟಲ್ ಲೈಬ್ರರಿ, ಮೈಸೂರು

Synopsys

ಕನ್ನಡ ನಾಡು-ನುಡಿ ಚಿಂತಕರಾದ ಎಂ.ಎ. ರಾಮಾನುಜಯ್ಯಂಗಾರ್ಯ ಹಾಗೂ ಎಸ್.ಜಿ. ನರಸಿಂಹಾಚಾರ್ ಜಂಟಿಯಾಗಿ ‘ಮಂಗರಸ ಕವಿ ಪ್ರಣೀತ ಜಯನೃಪಕಾವ್ಯಂ’ ಕೃತಿ ಸಂಪಾದಿಸಿದ್ದಾರೆ. ಮಂಗರಸ ಕವಿಯು ಹೊಯ್ಸಳ ದೇಶಕ್ಕೆ ಸೇರಿದವರು. 15ನೇ ಶತಮಾನದ ಅಂತ್ಯಭಾಗದಲ್ಲಿ ಜೀವಿಸಿರಬಹುದೆಂದು ಹೇಳಲಾಗುತ್ತಿದೆ. ಈ ಕೃತಿಯನ್ನು ಪರಿವರ್ಧಿನಿ ಷಟ್ಪದಿಯಲ್ಲಿ ಬರೆದಿದ್ದು, ಇದರಲ್ಲಿ 16 ಸಂಧಿಗಳು, 1145 ಪದ್ಯಗಳು ಇವೆ.

About the Author

ಎಸ್.ಜಿ. ನರಸಿಂಹಾಚಾರ್
(11 September 1862 - 22 December 1907)

ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು.  ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು.  ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...

READ MORE

Related Books